ಬಂಟ್ವಾಳ: ಬಿ.ಸಿ.ರೋಡ್ ಮೇಲ್ಸೇತುವೆಯಿಂದ ಕೈಕುಂಜೆವರೆಗೆ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ಬಿ.ಸಿ.ರೋಡ್ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಈಗಿರುವ ರಸ್ತೆ ಬಂದ್ ಆಗಿದ್ದು ತಾತ್ಕಾಲಿಕವಾಗಿ ಬದಲಿ ರಸ್ತೆಯನ್ನು ನಿರ್ಮಿಸಲಾಗಿದೆ.
ಮಂಗಳೂರು ಕಡೆಗೆ ಸಂಚಾರಿಸುವ ಬಸ್ಸುಗಳು ಬಿ.ಸಿ.ರೋಡಿನಲ್ಲಿ ನಿಲ್ಲುವ ಸ್ಥಳದಿಂದ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಗೆ ಸಂಚರಿಸಲು ರಸ್ತೆಯನ್ನು ಕಲ್ಪಿಸಲಾಗಿದೆ. ಇದೀಗ ಕೋರ್ಟ್ ಹಾಗೂ ಬಂಟ್ವಾಳ ನಗರ ಪೊಲೀಸ್ ಠಾಣೆ, ಡಿವೈಎಸ್ಪಿ ಕಚೇರಿಗೆ ಬರಬೇಕಾದರೆ, ಸರ್ವೀಸ್ ರಸ್ತೆಯ ಪಕ್ಕ ಮಾಡಿದ ದಾರಿಯಿಂದ ಆಗಮಿಸಬೇಕಾಗುತ್ತದೆ.
ಬಿ.ಸಿ.ರೋಡ್ ಕೈಕುಂಜೆ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದ್ದು, ಮಿನಿ ವಿಧಾನಸೌಧದ ಪಾರ್ಶ್ವದಲ್ಲಿರುವ ಜಾಗದ ಕಾಂಕ್ರೀಟ್ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಬಿ.ಸಿ.ರೋಡ್ ಭೂ ಅಭಿವೃದ್ಧಿ ಬ್ಯಾಂಕ್ ಎದುರಿನಿಂದ ಮಿನಿ ವಿಧಾನಸೌಧದ ವರೆಗೆ 190 ಮೀಟರ್ ರಸ್ತೆ 2 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಯಾಗುತ್ತಿದೆ, ಮಾರ್ಚ್ 3ರಂದು ಈ ರಸ್ತೆ ಕಾಮಗಾರಿಗೆ ಶಾಸಕ ರಾಜೇಶ್ ನಾಯ್ಕ್ ಶಿಲಾನ್ಯಾಸ ನೆರವೇರಿಸಿದ್ದರು. 190 ಮೀಟರ್ ರಸ್ತೆ ಅಭಿವೃದ್ಧಿಗೊಳ್ಳಲಿದೆ.