ಬೆಂಗಳೂರು: ಇಡೀ ದೇಶದಲ್ಲೇ ಬೆಂಗಳೂರು ನಗರ ಜಿಲ್ಲೆ ಅತೀ ಹೆಚ್ಚು ಕೊರೋನಾ ಸಕ್ರೀಯ ಸೋಂಕಿತರನ್ನು ಹೊಂದಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಆಘಾತಕಾರಿ ವರದಿಯನ್ನು ನೀಡಿದೆ.
ರಾಜ್ಯದಲ್ಲಿ ಈ ಹಿಂದಿನ ಎಲ್ಲಾ ದಾಖಲೆಗಳನ್ನು ಮುರಿದು ನಿನ್ನೆ ಕೊರೋನಾ ಸೋಂಕಿನ ಸಂಖ್ಯೆ ದಾಖಲಾಗಿದೆ. ರಾಜ್ಯದಲ್ಲಿ ಕಳೆದ 24 ಗಂಟೆಯ ಅವಧಿಯಲ್ಲಿ 26,962 ಜನರಿಗೆ ಕೊರೋನಾ ಪಾಸಿಟಿವ್ ಆಗಿದೆ. ಬೆಂಗಳೂರು ನಗರದಲ್ಲಿ 16,662 ಮಂದಿಗೆ ಪಾಸಿಟಿವ್ ಆಗಿದ್ದು 124 ಮಂದಿ ಮೃತಪಟ್ಟಿದ್ದಾರೆ. 1,49,624 ಸಕ್ರಿಯ ಪ್ರಕರಣಗಳು ದಾಖಲಾಗಿದೆ.
ಈಗಾಗಲೇ ಬೆಂಗಳೂರಿನಲ್ಲಿ ಸೋಂಕಿತರಿಗೆ ಆಕ್ಸಿಜನ್, ಐಸಿಯು, ಬೆಡ್ ಕೊರತೆಯುಂಟಾಗಿದ್ದು ರೋಗಿಗಳು ಪರದಾಡಿ ಸಾವನ್ನಪ್ಪುತ್ತಿದ್ದಾರೆ. ಸೋಂಕು ನಿಯಂತ್ರಣಕ್ಕೆ ಸರ್ಕಾರ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದರೂ ಕೂಡ ರಾಜಧಾನಿಯಲ್ಲಿ ಕೋವಿಡ್ ಆಕ್ಟಿವ್ ಕೇಸ್‌ಗಳು ಹೆಚ್ಚುತ್ತಿವೆ.