ಬಂಟ್ವಾಳ : ಮನುಷ್ಯ ತನ್ನ ಜೀವನದಲ್ಲಿ ಎಷ್ಟು ಸಂಪತ್ತಭರಿತವಾಗಿ,ಪರಿಪೂರ್ಣತೆ ಹೊಂದಿದರೂ ಸಹ ಆರೋಗ್ಯದಲ್ಲಿ ಸಮತೋಲನ ಇಲ್ಲದಿದ್ದರೆ ಜೀವನ ಸಾರ್ಥಕವಾಗದು.ಈ ನಿಟ್ಟಿನಲ್ಲಿ ವ್ಯಕ್ತಿಯಲ್ಲಿನ ಸದೃಡ ಆರೋಗ್ಯವೇ ಜೀವನದ ಸಂಪತ್ತು ಎಂದೂ ಸಿದ್ದಕಟ್ಟೆ ಪದ್ಮ ಕ್ಲೀನಿಕ್ ವೈದ್ಯರಾದ ಡಾ|ಪ್ರಭಾಚಂದ್ರ ಜೈನ್ ಅಭಿಪ್ರಾಯ ಪಟ್ಟರು.
ಅವರು ನಿನ್ನೆ ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ,ನಿ.ಹಾಗೂ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ, ಇವರ ಸಹಯೋಗದಲ್ಲಿ ಕೆ.ಎಂ.ಸಿ.ಅತ್ತಾವರ ಆಸ್ಪತ್ರೆ ಇವರ ನೇತೃತ್ವದಲ್ಲಿ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ಸಭಾಂಗಣದಲ್ಲಿ ಜರಗಿದ ಲಾಯಲ್ಟಿ ಹೇಲ್ತ್ ಕಾರ್ಡ್ ನೋಂದಣಿ ಮತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತಾನಾಡಿದರು.ಆರೋಗ್ಯ ಕಾರ್ಡ್ ವಿತರಣೆ ಮಾಡದ ಎ.ಪಿ.ಎಂ.ಸಿ.ಯ ಮಾಜಿ ಸದಸ್ಯ ರತ್ನಕುಮಾರ್ ಚೌಟ ಮಾತಾನಾಡಿ ಬಡವರು ಆಕಸ್ಮಿಕವಾದ ಸಂದರ್ಭದಲ್ಲಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಾಲಾದಗ ಹೆಲ್ತ್ ಕಾರ್ಡ್ ಇಲ್ಲದೇ ದುಬಾರಿ ಮೊತ್ತ ಪಾವತಿಸಲು ಕಷ್ಟವಾಗುತ್ತೀದೆ.
ಇಂತಹ ಸಮಯದಲ್ಲಿ ಇಂತಹ ಆರೋಗ್ಯ ಕಾರ್ಡ್ ಗಳು ಸಹಕಾರಿ ಯಾಗಲಿವೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಸಿ.ಎ.ಬ್ಯಾಂಕ್ ಅಧ್ಯಕ್ಷ ಪ್ರಭಾಕರ ಪ್ರಭು ಕಾರ್ಡ್ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿ ಶುಭಾಶಯ ಕೋರಿದರು.
ವೇದಿಕೆಯಲ್ಲಿ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಅಧ್ಯಕ್ಷ ಮೈಕಲ್ ಡಿ,ಕೋಸ್ತ, ಸಿ.ಎ.ಬ್ಯಾಂಕ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರತಿ,ಕೆ.ಎಂ.ಸಿ .ಆಸ್ಪತ್ರೆ ಅತ್ತಾವರ ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾರ್ತಿಕ್ ನಾಯಕ್ ಉಪಸ್ತಿತರಿದ್ದರು.
ಸಭೆಯಲ್ಲಿ ಸಿ.ಎ.ಬ್ಯಾಂಕ್ ನಿರ್ದೇಶಕರಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಹರೀಶ್ ಆಚಾರ್ಯ, ಉಮೇಶ್ ಗೌಡ, ದೇವರಾಜ್ ಸಾಲಿಯಾನ್, ಜಾರಪ್ಪ ನಾಯ್ಕ,ಮಂದರಾತಿ ಶೆಟ್ಟಿ, ಅರುಣ ಶೆಟ್ಟಿ, ದಿನೇಶ್ ಪೂಜಾರಿ,ಮಾದವ ಶೆಟ್ಟಿಗಾರ್,ಸಿ.ಎ.ಬ್ಯಾಂಕ್ ಕಾನೂನು ಸಲಹೆಗಾರ ಸುರೇಶ್ ಶೆಟ್ಟಿ,
ರೋಟರಿ ಕ್ಲಬ್ ಸದಸ್ಯರಾದ ಬೋಜ ಮೂಲ್ಯ,ಕೇಶವ ಶಭರಿಸ,ಡಾ!ಕೃಷ್ಣಮೂರ್ತಿ, ಎಚ್.ಎ.ರಹಿಮಾನ್,ಮೋಹನ್ ಜಿ. ಮೂಲ್ಯ,. ನೋಣಯ ಶೆಟ್ಟಿಗಾರ್,ಆರಂಬೋಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರಭಾಕರ. ಎಚ್.ಉಪಸ್ಥಿತರಿದ್ದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ ಸ್ವಾಗತಿಸಿದರು.ಪಂಚಾಯತ್ ಅಭಿವೃದ್ಧಿ ಅಧಿಕಾರಿ ರೋ.ಗಣೇಶ್ ಶೆಟ್ಟಿ ದನ್ಯವಾದ ವಿತ್ತರು.
ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಘುಣಿಯ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ಕಾರ್ಯಕ್ರಮ ನಿರೂಪಿಸಿದರು.