ಪುಂಜಾಲಕಟ್ಟೆ: ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆಯಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿನ ಯೂತ್ ರೆಡ್ ಕ್ರಾಸ್ ಘಟಕ, ಭಾರತೀಯ ರೆಡ್ ಕ್ರಾಸ್ ಬೆಳ್ತಂಗಡಿ ತಾಲೂಕು ಘಟಕ ಹಾಗೂ ಕಾರ್ಮಿಕ ಕಲ್ಯಾಣ ಮಂಡಳಿ ವತಿಯಿಂದ ಉಚಿತ ವೈದಕೀಯ ಶಿಬಿರವನ್ನು ಕಾಲೇಜಿನಲ್ಲಿ ನಡೆಸಲಾಯಿತು.
ಕಾರ್ಯಕ್ರಮವನ್ನು ವೈದ್ಯರಾದ ಭಾಗ್ಯಲಕ್ಷ್ಮಿ ಉಧ್ಘಾಟಿಸಿ ಮಾತನಾಡಿ ಆರೋಗ್ಯ ಸಲಹೆಯನ್ನು ವಿದ್ಯಾರ್ಥಿಗಳಿಗೆ ನೀಡಿದರು, ರೆಡ್ ಕ್ರಾಸ್ ತಾಲೂಕು ಸಭಾಪತಿ ಮಾತನಾಡಿ ಕಾರ್ಮಿಕ ರಿಗೆ ಲಭ್ಯವಿರುವ ಸವಲತ್ತುಗಳನ್ನು ಸರಕಾರದಿಂದ ಪಡೆಯಲು ಸೋಚಿಸಿದರು, ವೈದ್ಯೆ ಚಂದ್ರವತಿ ಮಾತನಾಡಿ ವಿದ್ಯಾರ್ಥಿಗಳ ಸಮಸ್ಯೆಯ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸದರು, ಪ್ರಾಂಶುಪಾಲರಾದ ಪ್ರೊ. ಗಣಪತಿ ಭಟ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶುಭ ಸ್ವಾಗತಿಸಿ, ಅಫ್ರಿನಾ ಕಾರ್ಯಕ್ರಮವನ್ನು ನಿರೂಪಿಸಿದರು. ಉಪನ್ಯಾಸಕ ರಾದ ಡಾ. ಲೋಕೇಶ್, ಪ್ರೊ. ದೀಕ್ಷಿತಾ, ಪ್ರೊ. ಗೀತಾ ಖಂಡೋಜಿ ಲಮಾಣಿ, ನಳಿನಿ ಕುಮಾರಿ, ಒಲಿಂಡ, ರೀಟ, ಸುಜಿತ್ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಮತ್ತು ವಿದ್ಯಾರ್ಥಿಗಳ ಹೆತ್ತವರಿಗೆ ವೈದ್ಯಕೀಯ ತಪಾಸಣೆ ಮಾಡಲಾಯಿತು. ಪ್ರೊ. ಶೇಖರ್ ವಂದಿಸಿದರು.