ಬಂಟ್ವಾಳ, ಮಾ.16: ಗೂಡಿನಬಳಿ ವೆಲ್ಫೇರ್ ಅಸೋಸಿಯೇಷನ್ ಸೌದಿ ಅರಬಿಯಾ ಹಾಗೂ ಗೂಡಿನಬಳಿ ಸಮನ್ವಯ ಸಮಿತಿ ವತಿಯಿಂದ ವಿವಿಧ ಸಾಧಕರಿಗೆ ಅಭಿನಂದನಾ ಕಾರ್ಯಕ್ರಮ ಸೋಮವಾರ ಗೂಡಿನಬಳಿ ಜೆ.ಎಂ. ರೆಸಿಡೆನ್ಸಿಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಸಾಮಾಜಿಕ ಕಾರ್ಯಕರ್ತ, ತುಂಬೆ ಗ್ರಾಮ ಪಂಚಾಯತ್ ಸದಸ್ಯ ಝಹೂರ್ ಅಹ್ಮದ್ ತುಂಬೆ, ಹಯಾತುಲ್ ಇಸ್ಲಾಮ್ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕರಾದ ಜಿ.ಎಮ್.ಮುಹಮ್ಮದ್ ಮತ್ತು ಅಬ್ದುಸ್ಸಲಾಮ್ ಮಾಸ್ಟರ್, ನಿವೃತ್ತ ಅಧ್ಯಾಪಕ ಜಿ.ಕೆ.ಮೋನು, ಜಿಲ್ಲಾ ರಾಜ್ಯೋತ್ಸವ ಪ್ರಸಸ್ತಿ ಪುರಸ್ಕೃತ ಅಬ್ದುಲ್ ಸತ್ತಾರ್ ಗೂಡಿನ ಬಳಿ ಅವರನ್ನು ಸನ್ಮಾನಿಸಲಾಯಿತು.
ಸತ್ತಾರ್ ಗೂಡಿನ ಬಳಿ ಅವರ ಪುತ್ರ ಕಲಾವಿದ ಶಾಹಿನ್ ರಹ್ಮಾನ್, ಜಿ.ಎಂ. ಮಾಸ್ಟರ್ ಅವರ ಭಾವ ಚಿತ್ರವನ್ನು ಬಿಡಿಸಿ ಅವರಿಗೆ ಹಸ್ತಾಂತರಿಸಿದನು.
ಗೂಡಿನ ಬಳಿ ಜುಮಾ ಮಸೀದಿಯ ಅಧ್ಯಕ್ಷ, ಕಮೀಟಿ ಸದಸ್ಯರು, ವೆಲ್ಫೇರ್ ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಊರಿನ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಸಮೀವುಲ್ಲಾ ಗೂಡಿನ ಬಳಿ ಸ್ವಾಗತಿಸಿದರು. ನೂರುದ್ದೀನ್ ಮಾಸ್ಟರ್ ಧನ್ಯವಾದ ಸಲ್ಲಿಸಿದರು.