ಬಂಟ್ವಾಳ : ಮಹಿಳೆಯರು ಉತ್ತಮ ಆರೋಗ್ಯವನ್ನು ಗಳಿಸಿಕೊಂಡು, ಶುಚಿತ್ವದ ಕಡೆಗೆ ಗಮನ ಹರಿಸಿ,ಸೋಮರಿತನ ಬಿಟ್ಟು ಯಾವುದಾದರೊಂದು ವೃತ್ತಿಯನ್ನು ಕೈಗೊಂಡು ಜೀವನದಲ್ಲಿ ಉದ್ಬವಿಸಬಹುದಾದ ಎಲ್ಲಾ ಸವಾಲುಗಳನ್ನು ಎದುರಿಸಿ ಮಾನಸಿಕ ಒತ್ತಡದಿಂದ ವಿಮುಕ್ತರಾದಾಗ ಮಹಿಳಾ ಸಬಲೀಕರಣ ಸಾಕಾರಗೊಳ್ಳಲು ಸಾದ್ಯ ಎಂದು ಸಿದ್ದಕಟ್ಟೆ ಅನಂತ ಪದ್ಮಾ ಹೆಲ್ತ್ ಸೆಂಟರ್ ನ ವೈದ್ಯರಾದ ಡಾ:ಸೀಮಾ ಸುದೀಪ್ ಹೇಳಿದರು.
ಅವರು ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ ಸಂಗಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ನಡೆದ ಮಹಿಳಾ ಗ್ರಾಮ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಹಿಳಾ ಸಬಲೀಕರಣ ಮತ್ತು ಆರೋಗ್ಯದ ಬಗ್ಗೆ ಮಾಹಿತಿ ನೀಡಿದರು.
ಗಂಡು ಮತ್ತು ಹೆಣ್ಣು ಒಂದೇ ನಾಣ್ಯದ ಎರಡು ಮಖಗಳಂತೆ ಒಬ್ಬರನೊಬ್ಬರು ಪರಸ್ಪರ ಹೊಂದಾಣಿಕೆ ಜೀವನ ಸಾಗಿಸುವ ಪ್ರವೃತ್ತಿ ಅನುಸರಿಸ ಬೇಕು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯತ್ ಉಪಾದ್ಯಕ್ಷರಾದ ವಿಮಲ ಮೋಹನ್ ಮಾತನಾಡಿ ಮಹಿಳೆಯರು ಕೀಳರಿಮೆ ಬಿಟ್ಟು ಸಮಾಜದಲ್ಲಿ ಮುಂಚೂಣಿ ಪಾತ್ರವಹಿಸ ಬೇಕು ಎಂದು ಶುಭ ಕೋರಿದರು.
ವೇದಿಕೆಯಲ್ಲಿ ಸಿದ್ದಕಟ್ಟೆ ಸಿ.ಎ.ಬ್ಯಾಂಕ್ ನಿರ್ದೇಶಕಿ ಮಂದಾರತಿ ಶೆಟ್ಟಿ, ಮಹಿಳಾ ಸಂಘ ದ ಡೆನ್ಸಿ ಜ್ಯೋತಿ, ಉಪಸ್ಥಿತರಿದ್ದರು.
ಸಮಾರಂಭದಲ್ಲಿ ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಸತೀಶ್ ಪೂಜಾರಿ, ತಾಲೂಕು ಪಂಚಾಯತ್ ಸದಸ್ಯ ಪ್ರಭಾಕರ ಪ್ರಭು, ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿಯ ಅಧ್ಯಕ್ಷ ಮೈಕಲ್ ಡಿ’ಕೋಸ್ತ, ಗ್ರಾಮ ಪಂಚಾಯತ್ ಸದಸ್ಯರಾದ ರಾಜೀವಿ ಕೋಟ್ಯಪ್ಪ ಪೂಜಾರಿ, ಹೇಮಲತಾ,ಶಕುಂತಲಾ ಬೆನಡಿಕ್ಟ ಡಿ’ಕೊಸ್ತ ,ಶಾರದ,ಪ್ರೇಮ ರೋಟರಿ ಕ್ಲಬ್ ಸಿದ್ದಕಟ್ಟೆ ಫಲ್ಗುಣಿ ಯ ಸದಸ್ಯರಾದ ರೋ|ಮೋಹನ್ ಜಿ.ಮೂಲ್ಯ,ರೋ|ಎಚ್.ಎ.ರಹಿಮಾನ್ ಹಾಗೂ ಆಶಾ ಕಾರ್ಯಕರ್ತರು,ಅಂಗನವಾಡಿ ಕಾರ್ಯಕರ್ತೆಯರು , ಸಂಜೀವಿನಿ ಸ್ವಸಹಾಯ ಸಂಘದ ಸದಸ್ಯರು,ಊರಿನ ಮಹಿಳೆಯರು ಭಾಗವಹಿಸಿದ್ದರು.
ಸಂಗಬೆಟ್ಟು ಗ್ರಾಮ ಪಂಚಾಯತ್ ಗ್ರಂಥಾಲಯ ಮೇಲ್ವಿಚಾರಕಿ ಶೋಭಾ ಸ್ವಾಗತಿಸಿ, ಧನ್ಯವಾದ ವಿತ್ತರು.ಗ್ರಾಮ ಪಂಚಾಯತ್ ಕಾರ್ಯದರ್ಶಿ ರೋಹಿಣಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.