ಬಂಟ್ವಾಳ: ಗಂಡು ಹೆಣ್ಣು ಎನ್ನುವ ತಾರತಮ್ಯವೆಸಗದೆ, ಮಕ್ಕಳನ್ನು ಸಮಾನಾಗಿ ಬೆಳೆಸಿ, ಸಂಸ್ಕಾರ ನೀಡುವುದರೊಂದಿಗೆ ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂದು ಯುವವಾಹಿನಿ ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಸಂಧ್ಯಾ ಕುಳಾಯಿ ಹೇಳಿದರು.
ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ನೇತೃತ್ವದಲ್ಲಿ ತಾಲೂಕು ಬಿಲ್ಲವ ಸೇವಾ ಸಂಘದ ಸಹಯೋಗದೊಂದಿಗೆ ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಭಾನುವಾರ ಸಖೀ ಸಂವಾದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಕಾರ್ಯಕ್ರಮ ಉದ್ಘಾಟಿಸಿದರು.ಯುವವಾಹಿನಿ ಅಧ್ಯಕ್ಷ ಸುಂದರ ಬೋಳಂಗಡಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ನಯನಾ ಜಯ, ಮಹಿಳಾ ಸಂಘಟನಾ ನಿರ್ದೇಶಕರಾದ ಸ್ನೇಹಾ, ರಚನಾ ಮೊದಲಾದವರು ಉಪಸ್ಥಿತರಿದ್ದರು. ಆರೋಗ್ಯದ ಬಗ್ಗೆ ಡಾ.ವೀಣಾ ತೋಳ್ಪಾಡಿ, ನ್ಯಾಯದ ಬಗ್ಗೆ ವಕೀಲೆ ರೇಖಾ ಶೆಟ್ಟಿ, ಮನಸ್ಸಿನ ಬಗ್ಗೆ ಮನೋರೋಗ ತಜ್ಞೆ ಡಾ.ಅರುಣಾ ಯಡಿಯಾಳ್, ಸಮಾಜದ ಬಗ್ಗೆ ಸಾಮಾಜಿಕ ಕಾರ್ಯಕರ್ತೆ ಅತ್ರಾಡಿ ಅಮೃತಾ ಶೆಟ್ಟಿ ಸಂವಾದ ನಡೆಸಿದರು. ಬೆಸೆಂಟ್ ಕಾಲೇಜು ಸಹಾಯಕ ಪ್ರಾಧ್ಯಾಪಕಿ ಸ್ಮಿತಾ ಶೆಣೈ ಸಮನ್ವಯಕರಾಗಿದ್ದರು. ಪ್ರಜ್ನಾ ಒಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.
ಬಿ.ಸಿ.ರೋಡ್ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ಸಖಿ ಸಂವಾದ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಉದ್ಘಾಟಿಸಿದರು. ಯುವವಾಹಿನಿ ಅಧ್ಯಕ್ಷ ಸುಂದರ ಬೋಳಂಗಡಿ, ಯುವವಾಹಿನಿ ಕೇಂದ್ರ ಸಮಿತಿ ಮಹಿಳಾ ಸಂಘಟನಾ ನಿರ್ದೇಶಕಿ ಸಂಧ್ಯಾ ಕುಳಾಯಿ, ತಾಲೂಕು ಬಿಲ್ಲವ ಮಹಿಳಾ ಸಂಘದ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ನಯನಾ ಜಯ, ಮಹಿಳಾ ಸಂಘಟನಾ ನಿರ್ದೇಶಕರಾದ ಸ್ನೇಹಾ, ರಚನಾ ಮೊದಲಾದವರು ಉಪಸ್ಥಿತಿರಿದ್ದರು.