ಬಂಟ್ವಾಳ: ಬಂಟ್ವಾಳ ರಾರಾಸಂ ಫೌಂಡೇಶನ್‌ನ ದಶ ಸಂಭ್ರಮ ಕಾರ್ಯಕ್ರಮ ಮಾ.21 ಆದಿತ್ಯವಾರ ಬೆಳಗ್ಗೆ 9 ರಿಂದ ಬಿ.ಸಿ.ರೋಡಿನ ಲಯನ್ಸ್ ಸೇವಾ ಮಂದಿರದಲ್ಲಿ ನಡೆಯಲಿದೆ ಎಂದು ಫೌಂಡೇಶನ್ ಅಧ್ಯಕ್ಷ ರಾಧಾಕೃಷ್ಣ ಬಂಟ್ವಾಳ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ದಶ ಸಂಭ್ರಮ ಕಾರ್ಯಕ್ರಮವನ್ನು ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್. ಅವರು ಉದ್ಘಾಟಿಸಲಿದ್ದು, ಅತಿಥಿಗಳಾಗಿ ನಿವೃತ್ತ ಪ್ರಾಧ್ಯಾಪಕ ಬಿ.ರಾಮಚಂದ್ರ ರಾವ್, ವೈದ್ಯ ಡಾ| ಚೇತನ್‌ರಾಜ್, ಉದ್ಯಮಿ ಡಾ| ಎಸ್.ಎಂ.ಗೋಪಾಲಕೃಷ್ಣ ಆಚಾರ್ಯ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮಾನಾಥ ರೈ ಮೇರಾವು ಭಾಗವಹಿಸಲಿದ್ದಾರೆ.
ಸಂಜೆ 6.30 ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು, ಲಯನ್ಸ್ ಪ್ರಥಮ ಉಪಗವರ್ನರ್ ವಸಂತಕುಮಾರ್ ಶೆಟ್ಟಿ, ಬಳ್ಳಮಂಜ ಕ್ಷೇತ್ರದ ಡಾ| ಹರ್ಷ ಸಂಪಿಗೆತ್ತಾಯ, ಜೇಸಿಐ ವಲಯಾಧ್ಯಕ್ಷೆ ಸೌಜನ್ಯ ಹೆಗ್ಡೆ, ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ.ಸುವರ್ಣ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಡಾ| ಅಣ್ಣಯ್ಯ ಕುಲಾಲ್, ಎಚ್ಕೆ ನಯನಾಡು ಅವರು ರಾರಾಸಂ ಗೌರವ ಪುರಸ್ಕಾರ ಪಡೆಯಲಿದ್ದು, ದಾಮೋದರ ಬಿ.ಎಂ, ಸುಧಾಕರ ಆಚಾರ್ಯ, ಶ್ರೀನಿವಾಸ ಪೂಜಾರಿ ಮೆಲ್ಕಾರ್, ಸುಧಾಕರ ಸಾಲ್ಯಾನ್, ಎ.ಅಜೀಜ್ ಅವರು ಸಾಧನಾ ಪುರಸ್ಕಾರ, ಮಾ| ಸನ್ವಿತ್ ಕುಲಾಲ್, ತಕ್ಷಿಲ್ ಎಂ.ದೇವಾಡಿಗ, ಸೃಜನ್ ಪ್ರಸಾದ್ ಅವರು ಪ್ರತಿಭಾ ಪುರಸ್ಕಾರ ಪಡೆಯಲಿದ್ದಾರೆ.
ಡ್ಯಾನ್ಸ್ ಡಮಾಕಾ, ಚಿತ್ರಕಲೆ, ಛದ್ಮವೇಶ ಸೇರಿದಂತೆ ಹತ್ತಾರು ಬಗೆಯ ಸ್ಪರ್ಧೆಗಳು, ಕಾಪು ಪ್ರಶಂಸಾ ತಂಡದಿಂದ ಬಲೆ ತೆಲಿಪಾಲೆ ಕಾರ್ಯಕ್ರಮ ಪ್ರದರ್ಶನಗೊಳ್ಳಲಿದೆ.