ಬಂಟ್ವಾಳ: ಪೆಟ್ರೋಲ್, ಡೀಸೆಲ್ ಹಾಗೂ ಗ್ಯಾಸ್ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಮತ್ತು ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಾಜಿ ಸಚಿವರಾದ ಬಿ. ರಾಮನಾಥ ರೈಯವರ ನೇತೃತ್ವದಲ್ಲಿ ಮಾ 01ರಂದು ಸೋಮವಾರ ಬಿ.ಸಿ ರೋಡಿನ ಮಿನಿ ವಿಧಾನ ಸೌದದ ಮುಂಬಾಗದಲ್ಲಿ ಧರಣಿ ಸತ್ಯಗ್ರಹ ನಡೆಯಿತು.
ಆರಂಭದಲ್ಲಿ ಕೈಕಂಬ ಪೊಳಲಿ ದ್ವಾರದಿಂದ ಬಿಸಿರೋಡು ಮಿನಿವಿಧಾನಸೌಧದವರೆಗೆ ವಿಭಿನ್ನ ರೀತಿಯ ಪಾದಯಾತ್ರೆ ನಡೆಯಿತು.
ಪಾದಾಯಾತ್ರೆಯಲ್ಲಿ ಕತ್ತೆ ವಿಶೇಷ ಆಕರ್ಷಣೆ ಯಾಗಿತ್ತು. ಮತ್ತು ಎತ್ತಿನ ಗಾಡಿಯನ್ನು ಮಾಜಿ ಸಚಿವ ರಮಾನಾಥ ರೈ ಅವರ ಜೊತೆಯಲ್ಲಿ ಪಕ್ಷದ ಪ್ರಮುಖರು ಹೆಗಲಿಗೆ ಹೆಗಲು ಕೊಟ್ಟು ಎಳೆದುಕೊಂಡು ಬರಲಾಯಿತು.
ಕೈಕಂಬ ದ್ವಾರದಿಂದ ಆರಂಭದಲ್ಲಿ ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಹಾಗೂ ಪುರಸಭಾ ಸದಸ್ಯ ಹಸೈನಾರ್ ಸೈಕಲ್ ಸವಾರಿ ಮಾಡಿಕೊಂಡು ಪಾದಾಯಾತ್ರೆಯಲ್ಲಿ ಸಾಗಿದರು.
ಪಾದಯಾತ್ರೆ ಗಳ ಬಳಿಕ ಸಭಾ ಕಾರ್ಯಕ್ರಮ ನಡೆಯುತ್ತದ್ದಂತೆ ಪೆಂಡಲ್ ನ ಅಡಿಯಲ್ಲಿ ಹೊಲೆಯಲ್ಲಿ ಗಂಜಿ ಬೇಯಿಸಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಬಿ.ರಮಾನಾಥ ರೈ ಅವರು ಮಾತನಾಡಿ ಸುಳ್ಳು ಹೇಳಿ ಅಧಿಕಾರಕ್ಕೆ ಬಂದ ಪಕ್ಷದದವರ ಮುಖವಾಡ ಬಯಲು ಮಾಡಬೇಕಾಗಿದೆ .
ಮೋದಿ ಅವರು ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವುದಕ್ಕೆ ಸಾವಿರ ಸಾಕ್ಷಿಗಳಿವೆ ಎಂದು ಅವರು ಹೇಳಿದರು.
ವಕೀಲರಾದ ಕಾಂಗ್ರೆಸ್ ಮುಖಂಡ ಸುದೀರ್ ಕುಮಾರ್ ಮರೊಳಿ ಮಾತನಾಡಿ ಶಾಸಕರ ಸಹಿತ ಮುಖಂಡರನ್ನು ಮಂಪರು ಪರೀಕ್ಷೆ ಮಾಡಿದರೆ ಮೋದಿಯವರ ಆಡಳಿತ ಅವ್ಯವಸ್ಥೆ ಯ ಮತ್ತು ಬೆಲೆಏರಿಕೆಯಿಂದ ಜನರ ಮೇಲೆ ಆಗಿರುವ ಪ್ರಭಾವದ ಬಗ್ಗೆ ಸತ್ಯ ಹೇಳುತ್ತಾರೆ.
70 ವರ್ಷ ಆಡಳಿತ ಮಾಡಿದ ಕಾಂಗ್ರೆಸ್ 70 ದಾಟಲು ಬಿಟ್ಟಿಲ್ಲ ಡಿಸೇಲ್ ಬೆಲೆ 63 ದಾಟಲು ಬಿಟ್ಟಿಲ್ಲ ಸಬ್ಸಿಡಿಯಲ್ಲಿ ಗ್ಯಾಸ್ 335 ರೂ ಯಲ್ಲಿ ದಾಟಲು ಬಿಟ್ಟಿಲ್ಲ ಆದರೆ ನೀವು 898 ಮಾಡಿದಿರಿ ನಿಮಗೆ ಕಾಂಗ್ರೆಸ್ ಏನು ಮಾಡಿ ದೆ ಎಂದು ಕೇಳಲು ನೈತಿಕತೆ ಇದೆಯಾ ಎಂದರು.
ನಳಿನ್ ಕುಮಾರ್ ಬಣ್ಣ ಬಣ್ಣದ ಅಂಗಿ ಧರಿಸಿ ಜನರಿಗೆ ರಂಗೆಬ್ಬಿಸುವ ಕೆಲಸ ಮಾಡಿದ್ದೀರಿ ಹೊರತು ಬದುಕು ಕಟ್ಟುವ ಕೆಲಸ ನಿಮಗೆ ಮಾಡಲು ಸಾಧ್ಯವಾಗಿಲ್ಲ ಎಂದು ಹೇಳಿದರು.
ಬಿಜೆಪಿಯ ಒಡೆದು ಆಳುವ ನೀತಿಯಿಂದಾಗಿ ಮನೆ ಹಾಳಾಗಿ ಹೋಗಿದೆ ಎಂದು ಆರೋಪ ವ್ಯಕ್ತಪಡಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಬೇಬಿ ಕುಂದರ್, ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುದೀಪ್ ಶೆಟ್ಟಿ, ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಜಿ.ಪಂ.ಸದಸ್ಯರಾದ ಎಂ.ಎಸ್ ಮಹಮ್ಮದ್, ಪ್ರಮುಖರಾದ ಸುದರ್ಶನ ಜೈನ್, ಲುಕ್ಮಾನ್, ಪದ್ಮನಾಭ ರೈ, ಜೊಸ್ಮಿನ್ ಡಿ.ಸೋಜ, ಮಲ್ಲಿಕಾ ಶೆಟ್ಟಿ, ಮಂಜುಳಾಕುಶಲ ಮಂಜೊಟ್ಟಿ, ಸದಾಶಿವ ಬಂಗೇರ, ಮಹಮ್ಮದ್ ನಂದಾವರ, ಜನಾರ್ಧನ ಚೆಂಡ್ತಿಮಾರ್, ಲೋಲಾಕ್ಷ, ವಾಸುಪೂಜಾರಿ, ವೆಂಕಪ್ಪ ಪೂಜಾರಿ, ಗಂಗಾದರ ಪೂಜಾರಿ, ಮಹಮ್ಮದ್ ನಂದರಬೆಟ್ಟು, ಮಾಯಿಲಪ್ಪ ಸಾಲ್ಯಾನ್ ಹಾಗೂ ಈ ಧರಣಿ ಸತ್ಯಗ್ರಹದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಮುಖಂಡರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸದಸ್ಯರು ಹಾಗು ಪುರಸಭೆಯ ಸದಸ್ಯರು ಸೇರಿದಂತೆ ಕಾಂಗ್ರೆಸ್ ನ ಎಲ್ಲಾ ಕಾರ್ಯಕರ್ತರು ಭಾಗವಹಿಸಿದ್ದರು.