Wednesday, April 10, 2024

ಪೋಲೀಸ್ ಕ್ರೀಡಾ ಕೂಟದಲ್ಲಿ ಚಾಂಪಿಯನ್ ಆಗಿ ಬಂಟ್ವಾಳ ನಗರ ಪೋಲೀಸ್ ಠಾಣೆಯ ವನಿತಾ

ಬಂಟ್ವಾಳ: ಜಿಲ್ಲಾ ಪೊಲೀಸ್ ಇಲಾಖೆ ಯ ಸಿಬ್ಬಂದಿಗಳ ವಾರ್ಷಿಕ ಕ್ರೀಡಾಕೂಟ ಮಂಗಳೂರು ಪೊಲೀಸ್ ಕ್ರೀಡಾಂಗಣದಲ್ಲಿ ನಡೆಯಿತು.ವಿವಿಧ ಆಟೋಟಗಳು ನಡೆದು ಪುರುಷರ ವಿಭಾಗದ ಚಾಂಪಿಯನ್ ಆಗಿ ಜಿಲ್ಲಾ ಪೊಲೀಸ್ ನ ರಾಧಕೃಷ್ಣ ಗೌಡ, ಮಹಿಳಾ ವಿಭಾಗದಲ್ಲಿ ವನೀತಾ ಅವರು ಪ್ರಶಸ್ತಿ ಪಡೆದರು.
ತಂಡ ಪ್ರಶಸ್ತಿ ಡಿ.ಎ.ಆರ್/ಡಿ.ಪಿ.ಓ ತಂಡದ ಪಾಲಾಯಿತು.

ಸಮಾರೋಪ ಸಮಾರಂಭದಲ್ಲಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕರಾದ ದೇವಜ್ಯೋತಿ ರೇ ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಂ.ಲಕ್ಷ್ಮೀಪ್ರಸಾದ್ ಅವರು ವಿಜೇತರಿಗೆ ಬಹುಮಾನ ವಿತರಿಸಿದರು.
ಡಿ.ಎ.ಆರ್ ಘಟಕದ ಪೊಲೀಸ್ ನಿರೀಕ್ಷಕರಾದ ನಾರಾಯಣ ಪೂಜಾರಿ,ಜಿಲ್ಲೆಯ ಪೊಲೀಸ್ ಉಪಾಧಿಕ್ಷಕರುಗಳು, ನಿರೀಕ್ಷಕರುಗಳು, ಉಪ ನಿರೀಕ್ಷಕರುಗಳು ಉಪಸ್ಥಿತರಿದ್ದರು. ಸಮಾರೋಪ ಸಭೆಯ ನಂತರ ಮನರಂಜನೆಗಾಗಿ ಪೊಲೀಸ್ ಸಿಬ್ಬಂದಿಗಳಿಂದ ಕೊರೊನಾ ವಾರಿಯರ್ಸ್, ಕರ್ನಾಟಕ ವೈಭವ, ಶ್ವೇತಾ ಕುಮಾರ ಛದ್ಮವೇಶ ನಡೆಯಿತು..ಡಿ.ಎ.ಆರ್ ತಂಡವು ಪ್ರಸ್ತುತ ಪಡಿಸಿದ ಕೊರೊನಾ ವಾರಿಯರ್ಸ್ ನ ಕೊರೊನಾಕ್ಕೆ ಧರ್ಮವಿಲ್ಲ ಎಂಬ ಉತ್ತಮ ಸಂದೇಶ ನೀಡಿದ ಛದ್ಮವೇಷ ಸೇರಿದವರ ವಿಶೇಷ ಪ್ರಶಂಸೆ ಗೆ ಪಾತ್ರವಾಯಿತು.
ಛದ್ಮವೇಶ ಸ್ಪರ್ಧಾ ಕಾರ್ಯಕ್ರಮವನ್ನು ಖುದ್ದಾಗಿ ವೀಕ್ಷಿಸಿ ದ ಜಿಲ್ಲಾ ಪೋಲೀಸ್ ಅಧೀಕ್ಷಕರು ನಗದು ಬಹುಮಾನ ನೀಡಿ ಪ್ರೋತ್ಸಾಹ ನೀಡಿದ್ದಾರೆ.

ಬಂಟ್ವಾಳ ವೃತ್ತಕ್ಕೆ ಎರಡು ಪ್ರಥಮ ಬಹುಮಾನ
ಬಂಟ್ವಾಳ ವೃತ್ತದ ಪೋಲೀಸರು ವಾರ್ಷಿಕ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದು ಗುಂಪು ಸ್ಪರ್ಧೆಯಲ್ಲಿ ಎರಡು ಪ್ರಥಮ ಬಹುಮಾನ ಗಳನ್ನು ತಮ್ಮದಾಗಿಸಿಕೊಂಡರು.
ಹಗ್ಗ ಜಗ್ಗಾಟ ಮತ್ತು ಕಬ್ಬಡ್ಡಿ ಆಟದಲ್ಲಿ ಪ್ರಥಮ ಸ್ಥಾನವನ್ನು ಬಹುಮಾನ ಪಡೆದುಕೊಂಡರು.
ಹಾಗೂ 400*100 ಮೀಟರ್ ರಿಲೆ ಓಟದಲ್ಲಿ ತೃತೀಯ ಬಹುಮಾನ ಪಡೆದುಕೊಂಡರು.

ವೈಯಕ್ತಿಕ ಕ್ರೀಡೆಯಲ್ಲಿ ಚಾಂಪಿಯನ್ ಆಗಿ ಮೂಡಿ ಬಂದ ವನಿತಾ

ಬಂಟ್ವಾಳ ನಗರ ಪೋಲೀಸ್ ಠಾಣೆಯ ಮಹಿಳಾ ಪೋಲೀಸ್ ಸಿಬ್ಬಂದಿ ವನಿತಾ ಅವರು ವೈಯಕ್ತಿಕ ಆಟೋಟ ಸ್ಪರ್ಧೆಯಲ್ಲಿ ಚಾಂಪಿಯನ್ ಅಗಿ ಮಿಂಚಿದ್ದಾರೆ.
100, 200 , 400 ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಹಾಗೂ ಲಾಂಗ್ ಜಂಪ್ ನಲ್ಲಿ ದ್ವಿತೀಯ, ರೈಪಲ್ ಶೂಟಿಂಗ್ ನಲ್ಲಿ ಥರ್ಡ್ ಪ್ರೈಸ್ ಪಡೆದುಕೊಂಡಿದ್ದಾರೆ.
ಇವರು ಈ ಹಿಂದೆ ನಡೆದ ರಾಜ್ಯ ಮಟ್ಟದ ಪೋಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ನಗರ ಪೋಲಿಸ್ ಠಾಣೆಯ ಸಿಬ್ಬಂದಿ ಮುತ್ತಪ್ಪ ಅವರು 100, 400, 800 ಮೀಟರ್ ಓಟದಲ್ಲಿ ದ್ವೀತಿಯ ಹಾಗೂ 400* 100 ರಿಲೆಯಲ್ಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

ಸಶಸ್ತ್ರ ಮೀಸಲು ವಿಶೇಷ ಪಡೆ ಮಂಗಳೂರು , ಸುಳ್ಯ ವೃತ್ತ, ಪುತ್ತೂರು ವೃತ್ತ, ಬಂಟ್ವಾಳ, ಬೆಳ್ತಂಗಡಿ ವೃತ್ತದ ಪೋಲೀಸರು ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದರು.

More from the blog

ಎ.14ರ ಪ್ರಧಾನಿ ಮೋದಿ ಸಮಾವೇಶ ರದ್ದು : ರೋಡ್ ಶೋದಲ್ಲಿ ಮಾತ್ರ ಭಾಗಿ

ಮಂಗಳೂರು: ಏಪ್ರಿಲ್ 14 ರಂದು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಇದೀಗ ಕೊನೆ ಕ್ಷಣದಲ್ಲಿ ಈ ಸಮಾವೇಶ ರದ್ದುಪಡಿಸಲಾಗಿದೆ. ಏಪ್ರಿಲ್ 14ರಂದು ಮಂಗಳೂರಿನಲ್ಲಿ...

ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ….?​ ಇಲ್ಲಿದೆ ಮಾಹಿತಿ

ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದ್ದು, ಶೇ 81.15 ಮಂದಿ ಉತ್ತೀರ್ಣಗೊಂಡಿದ್ದಾರೆ. 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ...

ದ್ವಿತೀಯ ಪಿಯು ಫಲಿತಾಂಶ ಪ್ರಕಟ : ದಕ್ಷಿಣ ಕನ್ನಡ ಜಿಲ್ಲೆಗೆ ಮೊದಲ ಸ್ಥಾನ

ಬೆಂಗಳೂರು: ಮಾರ್ಚ್ 1ರಿಂದ ಮಾರ್ಚ್ 22ರವರೆಗೆ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ಬೆಂಗಳೂರಿನಲ್ಲಿ ಶಿಕ್ಷಣ ಇಲಾಖೆ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದೆ. ಈ ಬಾರಿ, ಶೇ 81.15 ಮಂದಿ ಉತ್ತೀರ್ಣರಾಗಿದ್ದಾರೆ....

ಶಾಲಾ ಸಮುದಾಯದತ್ತ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಮಾಣಿ: ಶೈಕ್ಷಣಿಕ ವಿಚಾರಗಳ ಸಂಬಂಧಿತವಾದ ಒಳ್ಳೆಯ ಚಚೆ೯ಗಳು ಮೂಡಿಬಂದಾಗ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಪೂರಕವಾದ ಕೆಲಸಗಳು ಮೂಡಲು ಸಾಧ್ಯ ‌. ಪ್ರತಿಯೊಬ್ಬ ವಿದ್ಯಾರ್ಥಿ, ಪೋಷಕರು,ತನ್ನ ಶಾಲೆಯ ಬಗ್ಗೆ ಒಳ್ಳೆಯ ಭಾವನೆ, ಸಂಬಂಧ ಇರಬೇಕು...