ಬಂಟ್ವಾಳ: ಹೆಂಡತಿಯೇ ಗಂಡನನ್ನು ಕೊಲೆ ಮಾಡಿದ ಘಟನೆಯೊಂದು ಬಂಟ್ವಾಳ ತಾಲೂಕಿನ ಗ್ರಾಮಾಂತರ ಪೋಲೀಸ್ ಠಾಣಾ ವ್ಯಾಪ್ತಿಯ ನಾವೂರ ಗ್ರಾಮದಲ್ಲಿ ನಡೆದಿದೆ.
ನಾವೂರ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಪೂಜಾರಿ (60) ಮೃತಪಟ್ಟ ವ್ಯಕ್ತಿ. ಕೊಲೆ ಆರೋಪದಡಿ ಸೇಸಪ್ಪ ಅವರ ಪತ್ನಿ ಉಮಾವತಿ ( 52) ಅವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
*ಘಟನೆ ವಿವರ*
ನಾವೂರ ಗ್ರಾಮದ ಸೂರ ಕ್ವಾಟ್ರಸ್ ನಿವಾಸಿ ಸೇಸಪ್ಪ ಅವರು ಕೂಲಿ ಕೆಲಸ ಮಾಡುತ್ತಿದ್ದು ದಿನ ಮನೆಯಲ್ಲಿ ಗಂಡ ಹೆಂಡತಿ ಮಧ್ಯೆ ಕುಡಿದು ಗಲಾಟೆ ನಡೆಯುತ್ತಿತ್ತು.
ಅದೇ ರೀತಿ ಇವರ ಮನೆಯಲ್ಲಿ ಮಾ.3 ರಂದು ರಾತ್ರಿ ಗಂಡ ಹೆಂಡತಿ ಮಧ್ಯೆ ಗಲಾಟೆ ನಡೆದಿತ್ತು. ಗಲಾಟೆ ಜೋರಾಗಿ ಹೊಡೆದಾಟದ ಹಂತಕ್ಕೆ ತಲುಪಿದ್ದು ಹೆಂಡತಿ ಮನೆಯಲ್ಲಿ ಇದ್ದ ಕತ್ತಿಯಿಂದ ಗಂಡನಿಗೆ ಹೊಡೆದಿದ್ದರು. ಇದರಿಂದ ಸೇಸಪ್ಪ ಅವರ ಬಲಹಣೆಗೆ ಗಾಯವಾಗಿದ್ದು ಮಗಳು ಇವರ ಜಗಳ ಬಿಡಿಸಿದ್ದಳು.
ಬಳಿಕ ಗಾಯವಾಗಿ ರಕ್ತ ಬಂದರೂ ಚಿಕಿತ್ಸೆ ಪಡೆಯದೆ ಮನೆಯಲ್ಲಿಯೇ ಉಳಿದಿದ್ದರು. ರಕ್ತಸ್ರಾವವಾದ್ದರಿಂದ ಹುಷಾರಿಲ್ಲ ಎಂದು ಮಲಗಿದ್ದ ಅಲ್ಲಿಯೇ ಮಾ.5 ರಂದು ಸಂಜೆ ಅವರು ಮೃತಪಟ್ಟಿದ್ದಾರೆ.
ಕೊಲೆ ಮಾಡಿದ್ದಾರೆ ಎಂಬ ಆರೋಪದಡಿ ಉಮಾವತಿ ಅವರನ್ನು ಬಂಟ್ವಾಳ ಗ್ರಾಮಾಂತರ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಅವರ ನೇತ್ರತ್ವದಲ್ಲಿ ಬಂಟ್ಚಾಳ ಗ್ರಾಮಾಂತರ ಎಸ್.ಐ.ಪ್ರಸನ್ನ ಅವರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.