ಬಂಟ್ವಾಳ: ಗ್ಯಾಸ್ ಟ್ಯಾಂಕ್ ರ್ ಇಕೋ ಕಾರಿಗೆ ಮೆಲ್ಕಾರ್ ಸಮೀಪದ ಪಾಣೆಮಂಗಳೂರು ಎಂಬಲ್ಲಿ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಿಸಿಲಾಗಿದೆ.
ಮುಲ್ಕಿ ಸಮೀಪದ ಕಿನ್ನಿಗೋಳಿ ಐಕಳ ನಿವಾಸಿಗಳು ಸುಳ್ಯ ನಿಂತಿಕಲ್ಲು ಎಂಬಲ್ಲಿ ಕೊರಗಜ್ಜ ದೈವದ ನರ್ತನ ಸೇವೆಗೆ ಡೋಲು ಬಾರಿಸುವ ಸೇವೆ ಸಲ್ಲಿಸಿದ ಬಳಿಕ ಬೆಳಿಗ್ಗೆ ವಾಪಸು ಆಗುತ್ತಿದ್ದರು.
ಅವರು ಪಾಣೆಮಂಗಳೂರು ಸಮೀಪಿಸುತ್ತಿದ್ದಂತೆ ಎದುರಿನಿಂದ ಗ್ಯಾಸ್ ಟ್ಯಾಂಕ್ ರ್ ಲಾರಿಗೆ ಮುಖಾಮುಖಿ ಡಿಕ್ಕಿಯಾಗಿದೆ.
ಡಿಕ್ಕಿಯಾದ ರಭಸಕ್ಕೆ ಕಾರು ಸಂಪೂರ್ಣ ಪುಡಿಪುಡಿಯಾಗಿದೆ.
ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಆರು ಮಂದಿಗೆ ಗಂಭೀರ ಗಾಯವಾಗಿದೆ.
ಕಾರಿನಲ್ಲಿ ರುವ ಪ್ರಯಾಣಿಕರ ಹೆಸರು: ರಘುನಾಥ, ಶೇಖರ ಐಕಳ, ಮುದರ, ರಾಜೇಶ, ಸಂದೀಪ, ಗೋಪಾಲ.
ಸ್ಥಳಕ್ಕೆ ಟ್ರಾಫಿಕ್ ಎಸ್‌ಐ.ರಾಜೇಶ್ ಮತ್ತು ತಂಡ ಬೇಟಿ ನೀಡಿ ಗಾಯಾಳುಗಳನ್ನು ಆಸ್ಪತ್ರೆ ಗೆ ದಾಖಲಿಸುವ ಕೆಲಸ ಹಾಗೂ ಟ್ರಾಫಿಕ್ ಕಂಟ್ರೋಲ್ ಕೆಲಸ ಮಾಡುತ್ತಿದ್ದಾರೆ