ವಿಟ್ಲ: ಮಾಣಿಲ ಗ್ರಾಮದ ಕುಕ್ಕಾಜೆ ಆಂಜನೇಯ ಶ್ರೀ ಕಾಳಿಕಾಂಬ ಕ್ಷೇತ್ರದಲ್ಲಿ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಲ್ಲಿ 54ನೇ ವರ್ಷದ ವಾರ್ಷಿಕ ಜಾತ್ರಾ ಮಹೋತ್ಸವವು ನಾನಾ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.
ಶ್ರೀ ಕ್ಷೇತ್ರದಲ್ಲಿ ನೂತನವಾಗಿ ನಿರ್ಮಾಣಗೊಂಡ ಶ್ರೀ ಗಣಪತಿ, ಶ್ರೀ ಆಂಜನೇಯ, ಶ್ರೀ ಶಿವ ಸಿರಿ ಕುಮಾರ ಸ್ವಾಮಿಯ ಪ್ರತಿಷ್ಠಾ ಮಹೋತ್ಸವ ನಡೆದವು.
ಕ್ಷೇತ್ರದಲ್ಲಿ ನಾನಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ, ತುಲಾಭಾರ ಸೇವೆ, ಕಲಶ ಸ್ನಾನ, ಮಹಾಪೂಜೆ, ಬಲಿ ಉತ್ಸವ, ಪಲ್ಲಕ್ಕಿ ಉತ್ಸವ ನಡೆಯಿತು. ಶ್ರೀ ದೇವಿಯ ಮಹಾಪೂಜೆ, ನಾಗ ದರ್ಶನ, ಬಲಿ ಉತ್ಸವ ಪಲ್ಲಕ್ಕಿ ಉತ್ಸವ, ಸಿಡಿ ಮದ್ದುಪ್ರದರ್ಶನ, ರಕ್ತೇಶ್ವರಿ ದೈವದ ನೇಮೋತ್ಸವ, ಶ್ರೀ ಆಂಜನೇಯ ಸೇವೆ, ಶ್ರೀ ದೇವಿಯ ದರ್ಶನ ಬಲಿ ಉತ್ಸವ ನಡೆಯಿತು.
ಸಾಂಸ್ಕೃತಿಕ ಕಾರ್ಯಕ್ರಮದ ಸ್ಥಳೀಯ ಮಕ್ಕಳ ನೃತ್ಯ ವೈವಿಧ್ಯ, ವಿಜಯಕುಮಾರ್ ಕೊಡಿಯಾಲ್‌ಬೈಲ್ ನಿರ್ದೇಶನದ ’ಒರಿಯರ್ದೊರಿ ಅಸಲ್’ ತುಳು ಸಾಮಾಜಿಕ ನಾಟಕ ಪ್ರದರ್ಶನ, ಶ್ರೀವಿಷ್ಣುಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಕೇಂದ್ರ ಮಂಜನಾಡಿ ಇವರಿಂದ ಬಿರ್ದ್‌ದ ಬೀರೆ ಅಭಿಮನ್ಯು ಎಂಬ ತುಳು ಯಕ್ಷಗಾನ ಬಯಲಾಟ ಪ್ರದರ್ಶನಗೊಂಡಿತು.
ರಕ್ತೇಶ್ವರಿ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದಲ್ಲಿ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಶ್ರೀರಕ್ತೇಶ್ವರಿ ದೈವದ ಕೆಂಡ ನರ್ತನ ಸೇವೆ ನಡೆಯಿತು.