ಬಂಟ್ವಾಳ: ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಬಿ.ಸಿ.ರೋಡು ಕೈಕುಂಜೆಯಲ್ಲಿ ಕೃಷಿ ಇಲಾಖೆ ನಿವೇಶನದ ಆವರಣದಲ್ಲಿ ಪಿಎಂಕೆಎಸ್‌ವೈ(ಸೂಕ್ಷ್ಮ ನೀರಾವರಿ ಯೋಜನೆ)ಯಲ್ಲಿ ಫಲಾನುಭವಿಗಳಿಗೆ ನೀರಾವರಿ ಸಲಕರಣೆಗಳನ್ನು ವಿತರಿದರು.
ಬಳಿಕ ಮಾತನಾಡಿದ ಅವರು, ಪ್ರಧಾನಮಂತ್ರಿ ಕೃಷಿ ಸಂಚಯ ಯೋಜನೆಯ ಲಾಭ ಪಡೆಯಲು ೧೦ ಶೇ.ವನ್ನು ಕೃಷಿಕರು ಪಾವತಿಸಿದರೆ ೯೦ ಶೇ. ವನ್ನು ಸರಕಾರ ಪಾವತಿ ಮಾಡುತ್ತದೆ. ಸುಮಾರು ೧೯ ಸಾವಿರ ರೂ.ಮೌಲ್ಯದ ನೀರಾವರಿ ಸೊತ್ತುಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರದ ಸಹಯೋಗದಲ್ಲಿ ವಿತರಿಸಲಾಗುತ್ತಿದೆ. ಬಂಟ್ವಾಳದಲ್ಲಿ ಸುಮಾರು ೩೯೩ ಫಲಾನುಭವಿಗಳು ಇದರ ಪ್ರಯೋಜನ ಪಡೆಯಲಿದ್ದಾರೆ ಎಂದರು.
ಬಂಟ್ವಾಳ ಸಹಾಯಕ ಕೃಷಿ ನಿರ್ದೇಶಕಿ ಪ್ರೇಮಾ ಡಿ.ಕಾಂಬ್ಳೆ, ಸಹಾಯಕ ಕೃಷಿ ಅಧಿಕಾರಿ ನಾರಾಯಣ ನಾಯ್ಕ್, ಕೃಷಿ ತಾಂತ್ರಿಕ ಅಧಿಕಾರಿ ನಂದನ್ ಶೆಣೈ ಹಾಗೂ ಇಲಾಖೆ ಸಿಬಂದಿ ಉಪಸ್ಥಿತರಿದ್ದರು.