ಬಂಟ್ವಾಳ: ಸರಪಾಡಿ-ಮಾವಿನಕಟ್ಟೆಯಲ್ಲಿ ನೂತನವಾಗಿ ಆರಂಭಗೊಂಡ ಕೀರ್ತನ್ ಭಂಡಾರಿ ಸರಪಾಡಿ ಮಾಲಕತ್ವದ ಲಕುಮಿ ಮೆನ್ಸ್ ಪಾರ್ಲರ್ ಮಾ. ೭ರಂದು ಮಾವಿನಕಟ್ಟೆಯ ಶ್ರೀರಾಮ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭಗೊಂಡಿತು.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಶಂಕರನಾರಾಯಣ ಹೊಳ್ಳ ಅವರು ಪ್ರಾರ್ಥನೆ ನೆರವೇರಿಸಿ ಶುಭಹಾರೈಸಿದರು. ಶಿವರಾಮ ಭಂಡಾರಿ ಹಾಗೂ ಜನಾರ್ದನ ಭಂಡಾರಿ ಅವರು ದೀಪ ಬೆಳಗಿ ಶುಭಕೋರಿದರು.
ಕಾಂಪ್ಲೆಕ್ಸ್ ಮಾಲಕ ದೇವದಾಸ್ ನಾಯಕ್ ಮಾವಿನಕಟ್ಟೆ, ಪ್ರಮುಖರಾದ ರಾಧಾಕೃಷ್ಣ ರೈ ಕೊಟ್ಟುಂಜ, ಡಾ.ಬಾಲಚಂದ್ರ ಶೆಟ್ಟಿ ಮೀಯಾರು, ಗಿರಿಧರ್ ಎಸ್.ಮಠದಬೆಟ್ಟು, ಸಂತೋಷ್ ಶೆಟ್ಟಿ ಸರಪಾಡಿ, ಆನಂದ ಶೆಟ್ಟಿ ಆರುಮುಡಿ, ಲಿಯೋ ಫೆನಾಂಡೀಸ್, ನಟರಾಜ್ ಕುಟ್ಟಿಕಳ, ಚೇತನ್ ಬಜ, ವಚನ್ ಬಜ, ಯೋಗೀಶ್ ಗೌಡ ನೀರೊಲ್ಬೆ, ಯೋಗೀಶ್ ಎಲ್, ದಯಾನಂದ ಕೋಟ್ಯಾನ್ ದರ್ಖಾಸು, ರಾಹುಲ್ ಕೋಟ್ಯಾನ್, ಸುಧೀಶ್ ದರ್ಖಾಸು, ಉಮೇಶ್ ದಡ್ಡಲಕಾಡು, ಕಿರಣ್ ಸರಪಾಡಿ, ಕಿಶನ್ ಸರಪಾಡಿ, ದಿನೇಶ್ ಬಿ.ಸರಪಾಡಿ, ವಿಖ್ಯಾತ್ ಆಳ್ವ ಕೊಟ್ಟುಂಜ ಮೊದಲಾದವರು ಶುಭಹಾರೈಸಿದರು.