ಇಲ್ಲಿಗೆ ಹಸಿವಾದಾಗಲೇ
ಬರಬೇಕೆಂದಿಲ್ಲ..
ಟೈಮ್ ಪಾಸ್ ಗು
ಬೈ ಟು ಕಾಫಿ ಕುಡಿಯಲೂ
ಬರಬಹುದು..
ಅತ್ತ ಫ್ಯಾಮಿಲಿ ರೂಮ್..
ಇತ್ತ ಇರುವುದು ಸಿಂಗಲ್ ಗೆ ಎಂದೇನಿಲ್ಲ..
ಎಲ್ಲಿ ಬೇಕಾದರೂ ಯಾರ ಜೊತೆಯಾದರೂ
ಕೂರಬಹುದು..
ಹಸಿವಾದವರು..
ಏನಾದರು ತಿನ್ನುವ ಅಂದು ಕೊಂಡವರು
ಯಾರು ಬೇಕಾದರೂ
ಒಳ ಬರಬಹುದು
ರೊಕ್ಕ ಇರಬೇಕಷ್ಟೇ..
ಜಾತಿ,ಧರ್ಮ ತೋರಿಸಿ
ಒಳ ಬರಬೇಕಿಲ್ಲ…
ಹಸಿವು ಕೂಡಾ ಹಾಗೆ ಅಲ್ಲವೇ..
ಸಂತೃಪ್ತಿಯಲ್ಲಿ
ತಿನ್ನುವವರ ಮಧ್ಯೆ
ಯಾರೋ ಒಬ್ಬ ಅತೃಪ್ತಿಯಲ್ಲಿ
ತಿನ್ನುತ್ತಿರಬಹುದು..
ಅಥವಾ ಇದಕ್ಕೆ ವಿರುದ್ಧವಾಗಿಯೂ
ಇರಬಹುದು..
ಹಸಿವ ನೀಗಿಸಲು ಬೇಕಾದಷ್ಟು
ದುಡ್ಡಿಲ್ಲದೆ
ಒಂದು ಕಾಫಿಗೆ ಮೊರೆ ಹೋಗಿರಬಹುದು
ಹಸಿವೆ ಇಲ್ಲದೆ ದುಡ್ಡಿದ್ದು
ಸಮಯ ಮುಂದೂಡಲು
ಅದೇ ಕಾಫಿಗೆ ಆರ್ಡರ್
ಮಾಡಿರಬಹುದು..
ಅಥವಾ ಚಟಕ್ಕೂ ಆಗಿರಬಹುದು..
ಒಟ್ಟಾರೆ
ಕಿಸೆಯಲ್ಲೆಸ್ಟಿದೆಯೋ
ಅಷ್ಟೇ ಹೊಟ್ಟೆ ತುಂಬಿಸಬಹುದು..
ಇದು ಹೊಟ್ಟೆ
ತುಂಬಿಸುವ ಹೋಟೆಲ್..
ಇಲ್ಲಿ ಕಾಸಿದ್ದರೆ ಮಾಲ್..
✍ಯತೀಶ್ ಕಾಮಾಜೆ