ಬಾರೊ ಗೆಳೆಯ ತೋರಿಸ್ತೀನಿ
ಅಂದದ ನಮ್ಮೂರ್ ಕೆರೆಯ
ಸಂಜೆ ಗಾಳೀಲಿ ನೋಡೋದ್ ಚೆಂದ
ಏರಿ ಇಳಿವ ತೆರೆಯ
ಗುಡ್ಡದ್ ಪಕ್ಕದಿ ಮುಳುಗೋ ಸೂರ್ಯ
ನೋಡು ಎಂಥ ಭವ್ಯ
ಕೆರೇಲ್ ಮುಳುಗಿ ಏಳೋ ಅವನು
ನಿಜಕು ಅಗ್ನಿ ದಿವ್ಯ
ಬಾತುಗಳಾಡೋ ಆಟ ನೋಡು
ಕಣ್ಣಿಗ್ ಅದುವೇ ಹಬ್ಬ
ಈಜು ಸಾಕಾದ್ ಮೇಲೆ ಏರ್ತವೆ
ಮರಿಗಳೊಡನೆ ದಿಬ್ಬ
ಬಿಳಿ ಕೆಂಪು ಕಮಲ ನೋಡು
ಮಣೀತಾವೆ ನಲಿದು
ಮೀನುಗಳೆಲ್ಲ ಸ್ವರ್ಗ ಸುಖದಿ
ಕುಣೀತಾವೆ ಉಲಿದು
ಊರು ಬಿಟ್ಟು ಹೋಗೋದ್ ಬೇಡ
ಎಷ್ಟೇ ಕಲಿತ್ರೂ ನಾವು
ಕೆರೆಯ ದಡದಿ ಕೇಯ್ಮೆ ಮಾಡಿ
ಮರೆಯೋಣೆಲ್ಲ ನೋವು
#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301