ಕಲ್ಲಡ್ಕ: ಶ್ರೀ ರಾಮ ಪದವಿ ಕಾಲೇಜ್ ಕಲ್ಲಡ್ಕ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ” *ಮಾನಸಿಕ ಆರೋಗ್ಯದೆಡೆಗೆ – ನಮ್ಮ ನಡಿಗೆ ” ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮವು ನಡೆಯಿತು.
ಡಾl.ಅನನ್ಯ ಲಕ್ಷ್ಮಿ ಸಂದೀಪ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾನಸಿಕ ಖಿನ್ನತೆಗೆ ಒಳಗಾಗುವ ಸಂದರ್ಭ ಮತ್ತು ಅದರ ಪರಿಹಾರಕ್ಕಾಗಿ ನಾವು ಮಾಡಬೇಕಾದ ಕಾರ್ಯಗಳ ಬಗ್ಗೆ ಸವಿವರವಾದ ಮಾಹಿತಿಯನ್ನು ದೃಶ್ಯ ಮಾಧ್ಯಮ ದ ಮೂಲಕ ಮಂಡಿಸಿದರು. ಸಂಚಾಲಕರಾದ ವಸಂತ ಮಾಧವ ಅಧ್ಯಕ್ಷತೆ ವಹಿಸಿದ್ದರು. ಪದವಿ ಆಡಳಿತ ಮಂಡಳಿ ಸದಸ್ಯರಾದ ಪ್ರೇಮ ಮಾಣಿ, ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಸುಕನ್ಯಾ , ರಾಷ್ಟ್ರೀಯ ಸೇವಾ ಯೋಜನಾ ಸಂಯೋಜನಾಧಿಕಾರಿಗಳಾದ ಯತಿರಾಜ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನವ್ಯ ಪ್ರಥಮ ಬಿಕಾಂ ಸ್ವಾಗತಿಸಿ, ಸುಷ್ಮಾ ದ್ವಿತೀಯ ಬಿಕಾಂ ವಂದಿಸಿ, ಅಂತಿಮ ವರ್ಷದ ಮಧುರ ಕಾರ್ಯಕ್ರಮ ನಿರೂಪಿಸಿದರು…