ವಿಟ್ಲ: ಯಾವುದೇ ಸವಾಲಿನ ಕ್ಷಣಗಳನ್ನು ಮಹಿಳೆ ಧೃತಿಗೆಡದೇ ಎದುರಿಸಬೇಕು. ಲೈಂಗಿಕ ದೌರ್ಜನ್ಯ, ಶೋಷಣೆಯಂತಹ ಸಂದರ್ಭಗಳಲ್ಲಿ ಕಾನೂನಿನ ರಕ್ಷಣೆಯೊಂದಿಗೆ ಮುನ್ನಡೆಯಬೇಕು ಎಂದು ಬಂಟ್ವಾಳ ಮಹಿಳಾ ಸಾಮತ್ವನ ಕೇಂದ್ರದ ಆಪ್ತ ಸಹಾಯಕಿ ಗೀತಾಶ್ರೀ ಹೇಳಿದರು.
ಅವರು ಬುಧವಾರ ಪುಣಚ ಗ್ರಾಮ ಪಂಚಾಯಿತಿ ಸಭಾ ಭವನದಲ್ಲಿ ನಡೆದ ಮಹಿಳಾ ಗ್ರಾಮಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದರು.
ಸಭಾಧ್ಯಕ್ಷತೆ ವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ ಮೂಡಂಬೈಲು ಮಾತನಾಡಿ ಮಹಿಳೆ ಪ್ರತಿಯೊಂದು ವಿಚಾರಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು. ಮಹಿಳಾ ಸ್ವಾವಲಂಬತೆ ಗ್ರಾಮದ ಕ್ಷಿಪ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹೆಣ್ಣು ಶಿಶು ಪ್ರದರ್ಶನ, ಪೋಷಣ್ ಪಕ್ವಾಡ ಕಾರ್ಯಕ್ರಮ ನಡೆಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸೋಮಕ್ಕ ಭಾಗವಹಿಸಿದ್ದರು.
ಪುಣಚ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಪ್ರತಿಭಾ ಜಗನ್ನಾಥ ಗೌಡ, ಸದಸ್ಯರಾದ ಗಂಗಮ್ಮ, ಲಲಿತ, ಬೇಬಿ, ಹರೀಶ್ ಎಂ, ಮಹೇಶ್ ಶೆಟ್ಟಿ, ಗಿರಿಜ, ಉದಯ ಕುಮಾರ್, ಸುಜಾತ, ಸರೋಜಿನಿ, ತೀರ್ಥಾರಾಮ ನಾಯಕ್, ರೇಖಾ, ರೇಶ್ಮಾ, ಶಾರದಾ, ಅಶೋಕ್ ಕುಮಾರ್, ಆನಂದ ನಾಯ್ಕ, ವಾಣಿಶ್ರೀ ಉಪಸ್ಥಿತರಿದ್ದರು.
ಪುಣಚ ಗ್ರಾಮ ಪಂಚಾಯಿತಿ ಪಿಡಿಒ ಲಾವಣ್ಯ ಪಿ. ಸ್ವಾಗತಿಸಿ, ವಂದಿಸಿದರು.