ಬಂಟ್ವಾಳ: ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ಸೇವಾ ಸಮಿತಿಯಲ್ಲಿ ಸುಮಾರು 22 ವರ್ಷಗಳ ಕಾಲ ಸೇವೆ ಅಧ್ಯಕ್ಷರಾಗಿ, ದೇವಸ್ಥಾನದ ಅಭಿವೃದ್ದಿಗೆ ಅಪಾರವಾಗಿ ಶ್ರಮಿಸಿ ಈಚೆಗೆ ನಿಧನರಾದ ದಾಮೋದರ ರಾವ್ ಅವರಿಗೆ ಸಾರ್ವಜನಿಕ ಶೃದ್ದಾಂಜಲಿ ಸಭೆಯು ಶ್ರೀ ರಕ್ತೇಶ್ವರ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯಿತು. ಸಮಿತಿಯ ಕಾರ್ಯದರ್ಶಿ ಶಿವಶಂಕರ್ ಅವರು ದಿವಂಗತ ದಾಮೋದರ ರಾವ್ ಅವರ ಸೇವೆಯನ್ನು ಸ್ಮರಿಸಿ, ಬಿ.ಸಿ.ರೋಡಿನ ಹಿಂದೂ ರುದ್ರ ಭೂಮಿ ನಿರ್ಮಾಣದಲ್ಲಿಯು ಪ್ರಮುಖ ಪಾತ್ರ ವಹಿಸಿದ್ದರಲ್ಲದೆ ಕೈಕುಂಜೆಯ ಪೂರ್ವಬಡಾವಣೆಯ ಅಭಿವೃದ್ಧಿಯಲ್ಲ ಶ್ರಮಿಸಿದ್ದರು ಎಂದರು. ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯ ಸೇವಾ ಸಮಿತಿ ಅಧ್ಯಕ್ಷ ರಾಜೇಶ್ ಎಲ್.ನಾಯಕ್, ಉಪಾಧ್ಯಕ್ಷ ಬಿ.ಮೋಹನ್, ಕೋಶಾಧಿಕಾರಿ ಬಿ.ವಿಶ್ವನಾಥ್ ಹಾಗೂ ಟ್ರಸ್ಟಿಗಳು ಉಪಸ್ಥಿತರಿದ್ದರು.