ಬಂಟ್ವಾಳ : ಪತಿಯ ಸಾವಿನ ಬೆನ್ನಲ್ಲೇ ಪತ್ನಿಯೂ ಬದುಕನ್ನು ಕೊನೆಗಳಿಸಿದ ಘಟನೆ ಬಂಟ್ವಾಳದಲ್ಲಿ ನಡೆದಿದೆ.
ಬಂಟ್ವಾಳ ಕಸ್ಬಾ ಗ್ರಾಮದ ಮುಗ್ಡಾಲ್ ಗುಡ್ಡೆ ಎಂಬಲ್ಲಿ ಪೂವಪ್ಪ ಮೂಲ್ಯ(70) ಎಂಬವರು ಸೋಮವಾರ ರಾತ್ರಿ ನಿಧನರಾಗಿದ್ದು ಮಂಗಳವಾರ ಸಂಜೆ ಅವರ ಧರ್ಮಪತ್ನಿ ಯಮುನಾ (63) ನಿಧನರಾಗಿದ್ದಾರೆ.
ಮದುವೆ ಸ್ವರ್ಗದಲ್ಲಿ ನಿಗದಿಯಾಗುತ್ತೆ ಅನ್ನುವ ಮಾತಿದೆ.
ಹಾಗೆಯೇ ಸಾವಿಗೂ ದಿನ ನಿಗದಿಯಾಗಿರುತ್ತೆ.
ಆದರೆ ಪತಿ ಸಾವಿನ ಬೆನ್ನಲ್ಲೇ ಪತ್ನಿ ಜೀವನವನ್ನು ಕೊನೆಗೊಳಿಸಿದ ಘಟನೆಗಳು ನಡೆಯುವುದು ಬಲು ಅಪರೂಪ.
ಪೂವಪ್ಪ ಮೂಲ್ಯರು ಬಂಟ್ವಾಳದಲ್ಲಿ ಎಲೆ ಅಡಿಕೆ ವ್ಯಾಪಾರದಲ್ಲಿ ಪ್ರಸಿದ್ಧಿಯಾಗಿದ್ದರು.
ಮೃತರು ಮೂರು ಗಂಡು ಒಂದು ಹೆಣ್ಣು ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.