Friday, April 12, 2024

ವಿಶ್ವಗುಬ್ಬಚ್ಚಿ ದಿನ

ಬಂಟ್ವಾಳ: ಮಾ20ಕಲ್ಲಡ್ಕ, ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಜ್ಞಾನ ಸಂಘದ ವತಿಯಿಂದ ವಿಶ್ವಗುಬ್ಬಚ್ಚಿ ದಿನಾಚರಣೆಯ ಅಂಗವಾಗಿ ಮನೆ ಮನೆಯಲ್ಲೂ ಪಕ್ಷಿಗಳಿಗೆ ನೀರಿಡುವ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಮನೆಯಂಗಳದಲ್ಲಿರುವ ಹಾಗೂ ಇನ್ನಿತರ ಪಕ್ಷಿಗಳ ಬಗೆಗೆ ಜನಜಾಗೃತಿ ಉಂಟುಮಾಡಿ ಅವುಗಳ ಸಂಕಲಕ್ಕೆ ಉಂಟಾಗುತ್ತಿರುವ ಭೀತಿಯನ್ನು ತಡೆಗಟ್ಟುವ ಪಯತ್ನವಾಗಿ ಮಾರ್ಚ್ 20 ರಂದುವಿಶ್ವ ಗುಬ್ಬಚ್ಚಿಗಳ ದಿನಾಚರಣೆಯನ್ನುಆಚರಿಸಲಾಗುತ್ತದೆ.

“ರಾಮಾಯಣಕಾಲದಲ್ಲಿ ಪಕ್ಷಿಗಳೂ ಧರ್ಮ ಸಂಸ್ಥಾಪನೆಗೆ ಹೋರಾಟ ನಡೆಸಿರುತ್ತದೆ. ಇತಿಹಾಸ ಕಾಲದಿಂದ ಅಂಚೆ ಚೀಟಿ ಬಿಡುಗಡೆ ಆಗುವ ಮೊದಲು ಪಕ್ಷಿಗಳೇ ಸಂದೇಶ ವಾಹಕಗಳಾಗಿದ್ದವು. ಮಹಾರಾಷ್ಟ್ರದ ಲಾಪೋಡಿಯ ಎಂಬ ಗ್ರಾಮದಲ್ಲಿ ಇವತ್ತಿಗೂ ಪಕ್ಷಿಗಳಿಗೆ ಕಲ್ಲು ಹೊಡೆಯುವುದು ಅಪರಾಧವಾಗಿದೆ. ಮನುಷ್ಯ ಮತ್ತು ಪಕ್ಷಿಗಳಿಗೆ ನೈಸರ್ಗಿಕವಾದ ಅವಿನಾಭಾವ ಸಂಬಂಧವಿದೆ. ಪ್ರಾಕೃತಿಕ ಸಮತೋಲನ ಸಾಧಿಸಲು ಮತ್ತು ಭೂಮಿಯ ಮೇಲೆ ವೃಕ್ಷ ಸಂಪತ್ತನ್ನು ಉಳಿಸಿ ಬೆಳೆಸುವ ಮಹತ್ತರವಾಧ ಕೆಲಸವನ್ನು ಪಕ್ಷಿಗಳು ನೀಡುತ್ತಿದೆ. ಬದಲಾದಕಾಲಘಟ್ಟದಲ್ಲಿ ಪಕ್ಷಿಗಳ ಜೀವ ಸಂಕುಲ ಹಾಗೂ ವಾಸಸ್ಥಾನ ಅಳಿವಿನಂಚಿನಲ್ಲಿದೆ. ತಾಂತ್ರಿಕ ಬದುಕಿಗೆ ಜೋತು ಬಿದ್ದು, ಕೃಷಿಯಲ್ಲಿ ಕೀಟನಾಶಕ ಉಪಯೋಗಿಸಿ, ಪ್ಯಾಕೇಟ್ ಆಹಾರಗಳ ಬಳಕೆ ಮತ್ತು ಆವಾಸಗಳ ಕೊರತೆಯಿಂದ ಪಕ್ಷಿ ಸಂಕುಲ ನಾಶವಾಗುತ್ತದೆ. ಅತಿಯಾದ ತಾಪಾಮಾನ ಏರಿಕೆಯಿಂದ, ನೀರಿನ ಕೊರತೆಯನ್ನು ನೀಗಿಸಲು ಗೆರಟೆಯ ಮೂಲಕ ಮನೆಮನೆಗಳಲ್ಲಿ ಪಕ್ಷಿಗಳಿಗೆ ನೀರು ಇಡುವ ಕೆಲಸ ಮಾಡಿ” ಎಂದು ಅಧ್ಯಾಪಕರಾದ ಸುಮಂತ್ ಆಳ್ವ ಮಕ್ಕಳಿಗೆ ಕರೆ ನೀಡಿದರು.

ಭಾರತ ಸಂಚಾರ ನಿಗಮದ ನಿವೃತ್ತಉದ್ಯೋಗಿ ಪಿ.ಕೆ.ಪದ್ಮನಾಭ ಇವರು ಮಣ್ಣಿನ ಪಾತ್ರಗೆ ಕಲಶದಿಂದ ನೀರು ಹಾಕುವ ಮೂಲಕ ಪಕ್ಷಿಗಳಿಗೆ ನೀರಿಡುವ ಅಭಿಯಾನವನ್ನು ಉದ್ಘಾಟಿಸಲಾಯಿತು. ಶ್ರೀರಾಮ ಶಾಲೆಯ ಸಾವಿರ ವಿದ್ಯಾರ್ಥಿಗಳು ತಮ್ಮತಮ್ಮ ಮನೆಗಳಲ್ಲಿ ಪೋಷಕರೊಂದಿಗೆ ಪಕ್ಷಿಗಳಿಗೆ ನೀರಿಡುವ ಪ್ರತಿಜ್ಞೆಯನ್ನು ಮಾಡಿದರು.

ವಿಜ್ಞಾನ ಸಂಘದ ನಿರ್ದೇಶಕರಾದರಾ ಜೇಶ್ವರಿಯವರು ಕಾರ್ಯಕ್ರಮವನ್ನು ನಿರೂಪಿಸಿದರು. 6ನೇ ತರಗತಿಯ ವಿದ್ಯಾರ್ಥಿನಿಯರು ಗುಬ್ಬಚ್ಚಿಗೀತೆ ಹಾಡಿದರು. ತಬಲದಲ್ಲಿ 7ನೇ ತರಗತಿಯ ದುರ್ಗಾಶರಣ್ ಸಹಕರಿಸಿದನು. ಶಾಲೆಯ ಸುತ್ತಮುತ್ತಲಿರುವ ಮರಗಳಿಗೆ ಅಧ್ಯಾಪಕರು ಹಾಗೂ ವಿದ್ಯಾರ್ಥಿವೃಂದದವರು ಗೆರಟೆಯಲ್ಲಿ ನೀರು ತುಂಬಿಸಿ ನೇತು ಹಾಕಿದರು. ವಿದ್ಯಾರ್ಥಿ ನಾಯಕನಾದ ಗಗನ್, “ಈ ಕಾರ್ಯಕ್ರಮದಿಂದ ಪಕ್ಷಿಗಳ ಮೇಲಿನ ಕಾಳಜಿ ಹೆಚ್ಚಾಯಿತು ಮತ್ತು ಮನೆಯಲ್ಲಿಯೂ ಇಂತಹಕಾರ್ಯವನ್ನು ಪೋಷಕರೊಂದಿಗೆ ಸೇರಿ ಮುಂದುವರಿಸಬೇಕೆಂಬ ಆಸಕ್ತಿ ಮೂಡಿತು.” ತನ್ನಅಭಿಪ್ರಾಯವನ್ನು ಹೇಳಿದನು.

 

More from the blog

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...

ಲೋಕಸಭಾ ಚುನಾವಣೆಯ ಹಿನ್ನೆಲೆ : ಚಾರ್ಮಾಡಿಯ ಮೂವರು ಗಡಿಪಾರು

ಬೆಳ್ತಂಗಡಿ: ಚುನಾವಣ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಹಾಗೂ ಕೋಮು ಗಲಭೆಗಳಲ್ಲಿ ಭಾಗವಹಿಸುವ ಸಾಧ್ಯತೆ ಇರುವ ಕಾರಣ ಮೂವರು ರೌಡಿಶೀಟರ್‌ಗಳನ್ನು ಧರ್ಮಸ್ಥಳ ಪೊಲೀಸರು ಗಡಿಪಾರು ಮಾಡಿದ್ದಾರೆ. ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಗ್ರಾಮದ ನಿವಾಸಿಗಳಾದ...

ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶದೊಂದಿಗೆ ತೇರ್ಗಡೆ

2023-24ನೇ ಸಾಲಿನ ದ್ವಿತೀಯ ಪಿ.ಯು.ಸಿ ಪರೀಕ್ಷೆಯಲ್ಲಿ ಪಾಣೆಮಂಗಳೂರು, ನರಿಕೊಂಬುವಿನಲ್ಲಿರುವ ಹಿತೈಷಿ ತರಬೇತಿ ಕೇಂದ್ರದ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಕು.ಕೀರ್ತನ ಶೇ.95.6% ಅಂಕಗಳೊಂದಿಗೆ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆಯಾಗಿರುತ್ತಾರೆ ಎಂದು ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ. 2024-25ನೇ...