


ಬಂಟ್ವಾಳ: ಮಾ.17ಸರಕಾರಿ ಪ್ರಥಮ ದರ್ಜೆ ಕಾಲೇಜು ಸಿದ್ಧಕಟ್ಟೆ ಇದರ ರಾಷ್ಟ್ರೀಯ ಸೇವಾ ಯೋಜನೆ, ರೆಡ್‌ಕ್ರಾಸ್ ಘಟಕ, ಕೆಎಂಸಿ ಆಸ್ಪತ್ರೆ ಜ್ಯೋತಿ, ಮಂಗಳೂರು, ಸಂಗಬೆಟ್ಟು ಗ್ರಾಮ ಪಂಚಾಯತ್, ರೋಟರಿ ಕ್ಲಬ್ ಸಿದ್ಧಕಟ್ಟೆ ಇವುಗಳ ಜಂಟಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ 16/03/2021ರಂದು ಆಯೋಜಿಸಲಾಗಿತ್ತು. ಕಾರ್ಯಕ್ರಮವನ್ನು ಸತೀಶ್ ಪೂಜಾರಿ, ಅಧ್ಯಕ್ಷರು ಸಂಗಬೆಟ್ಟು ಗ್ರಾಮ ಪಂಚಾಯತ್ ಇವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ದಾನಗಳಲ್ಲಿ ಮಹಾದಾನ ರಕ್ತದಾನ. ಪರರ ಜೀವರಕ್ಷಣೆಯ ಸದುದ್ದೇಶ ಹೊಂದಿರುವ ಇಂತಹ ಕಾರ್ಯಕ್ರಮಗಳು ನಡೆಯುತ್ತಲೇ ಇರಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀರತ್ನ ಕುಮಾರ್ ಚೌಟ ಸದಸ್ಯರು ಕಾಲೇಜು ಅಭಿವೃದ್ಧಿ ಸಮಿತಿ ಇವರು ಆರೋಗ್ಯವಂತ ಯುವ ವಿದ್ಯಾರ್ಥಿಗಳು ರಕ್ತದಾನ ಮಾಡುವ ಮೂಲಕ ಮಾನವೀಯತೆಯನ್ನು ಮೆರೆಯಿರಿ ಎಂದರು.
ಡಾ.ಸುದೀಪ್, ವೈದ್ಯಾಧಿಕಾರಿಗಳು, ಶ್ರೀ ಅನಂತ ಪದ್ಮ ಹೆಲ್ತ್ ಸೆಂಟರ್ ಸಿದ್ಧಕಟ್ಟೆ ಇವರು ರಕ್ತದಾನದ ಮಹತ್ವವನ್ನು ವಿವರಿಸಿದರು. ಒಬ್ಬರು ರಕ್ತದಾನ ಮಾಡಿದರೆ ಮೂವರ ಪ್ರಾಣ ಉಳಿಸಲು ಸಾಧ್ಯ ಹಾಗೂ ರಕ್ತದಾನ ಮಾಡಿದವರ ದೇಹ ಕ್ರೀಯಾಶೀಲತೆಗೊಳ್ಳುತ್ತದೆ ಎಂದರು. ಡಾ.ಹರ್ಷ, ವೈದ್ಯಾಧಿಕಾರಿಗಳು ಕೆಎಂಸಿ ಮಂಗಳೂರು ಇವರು ಸಭೆಯನ್ನು ಉದ್ದೇಶಿಸಿ ಮಾತನಾಡಿ ಪ್ರತೀ ಮೂರು ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುವುದರಿಂದ ಅನೇಕ ದೈಹಿಕ ಹಾಗೂ ಮಾನಸಿಕ ಖಾಯಿಲೆಗಳಿಂದ ಮುಕ್ತರಾಗಬಹುದು ಎಂದು ತಿಳಿಸಿದರು. ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿನ ರಕ್ತ ನಿಧಿ ವಿಭಾಗದ ಸಿಬ್ಬಂದಿಗಳು ಆಗಮಿಸಿ ಬೆಳಿಗ್ಗೆ 9.30ರಿಂದ 1.30ರವರೆಗೆ 53 ಯುನಿಟ್ ರಕ್ತವನ್ನು ಶೇಖರಿಸಿದರು. ಕಾಲೇಜಿನ 32 ವಿದ್ಯಾರ್ಥಿಗಳು ಹಾಗೂ 04 ಉಪನ್ಯಾಸಕರು ರಕ್ತದಾನ ಮಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸೌಮ್ಯ ಹೆಚ್.ಕೆ ಇವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷರಾದ ಶ್ರೀ ಸಂದೇಶ್ ಶೆಟ್ಟಿ, ಪ್ರಭಾಕರ ಪ್ರಭು ಸದಸ್ಯರು ತಾಲೂಕು ಪಂಚಾಯತ್, ಮೈಕೆಲ್ ಡಿಕೋಸ್ತ ಅಧ್ಯಕ್ಷರು ರೋಟರಿ ಕ್ಲಬ್ ಸಿದ್ಧಕಟ್ಟೆ, ಶ್ರೀಮತಿ ಪದ್ಮಾ ನಾಯಕ್, ಪಿಡಿಓ ಇವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಹನುಮಂತಯ್ಯ ಜಿ.ಹೆಚ್, ಸಹಾಯಕ ಪ್ರಾಧ್ಯಾಪಕರು ಸ್ವಾಗತಿಸಿ ಡಾ.ಶ್ರೀನಿವಾಸ ಗ್ರಂಥಪಾಲಕರು ಇವರು ವಂದಿಸಿದರು. ಯಕ್ಷಿತಾ ಮತ್ತು ನೀಮಾ ಪ್ರಾರ್ಥಿಸಿ ಪ್ರಜ್ವಲ್ ತೃತೀಯ ಬಿಕಾಂ ನಿರೂಪಿಸಿದರು.


