ಬಂಟ್ವಾಳ: ಮಾ.17ಸಮಾಜಮುಖಿ ಕಾರ್ಯವನ್ನು ಕಳೆದ 54 ತಿಂಗಳುಗಳಿಂದ ಮಾಡುತ್ತ ಬಂದಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್(ರಿ.) ದಕ್ಷಿಣ ಕನ್ನಡ ಇದರ ನೂತನ ಪದಾಧಿಕಾರಿಗಳ ಆಯ್ಕೆ ನಿನ್ನೆ ಬಿ.ಸಿ ರೋಡ್ ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆಯಿತು.
ಅಧ್ಯಕ್ಷರಾಗಿ ಪ್ರವೀಣ್ ದೇವಾಡಿಗ ಕಾರಿಂಜ, ಪ್ರಧಾನ ಕಾರ್ಯದರ್ಶಿಯಾಗಿ ಸತೀಶ್ ಕರ್ಕೇರ ಅಲ್ಲಿಪಾದೆ ಇವರುಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಶ್ರೀಮತಿ ಸುಮತಿ ಪ್ರಭು ಪುಂಜಾಲಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ಚಂದು ಕೋಟ್ಯಾನ್ ಕುಪ್ಪೆಪದವು ಮತ್ತು ಖಜಾಂಚಿಯಾಗಿ ಗಣೇಶ್ ಕುಲಾಲ ಕಿನ್ನಿಬೆಟ್ಟು ಇವರುಗಳು ಆಯ್ಕೆಯಾದರು. ನಿಕಟಪೂರ್ವ ಅಧ್ಯಕ್ಷ ನವೀನ್ ಪಿ ಮಿಜಾರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಈ ಸಮಯದಲ್ಲಿ ಟ್ರಸ್ಟ್ನ ಸೇವಾ ಮಾಣಿಕ್ಯರು ಉಪಸ್ಥಿತರಿದ್ದರು.