Friday, April 12, 2024

ಕಲ್ಲಡ್ಕ: ನೂತನವಾಗಿ ಸೇರ್ಪಡೆಗೊಂಡ ವಿರ್ದ್ಯಾರ್ಥಿಗಳ ಪ್ರವೇಶೋತ್ಸವ

 

ಬಂಟ್ವಾಳ: ಮಾ.15ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ ನೂತನವಾಗಿ ಸೇರ್ಪಡೆಗೊಂಡ ವಿರ್ದ್ಯಾರ್ಥಿಗಳ ಪ್ರವೇಶೋತ್ಸವ ಕಾರ್ಯಕ್ರಮ ದಿನಾಂಕ 13ರಂದು ನಡೆಯಿತು. ಜೀವನ ಮೌಲ್ಯಗಳನ್ನು ತಿಳಿಸಬೇಕಾದುದು ಶಾಲೆಯ ಕರ್ತವ್ಯ. ಈ ಶಾಲೆಯು ಭಾರತೀಯ ಸನಾತನ ಮಾದರಿಯ ಶಿಕ್ಷಣವನ್ನು ಮಗುವಿಗೆ ಕೊಡುವ ಧ್ಯೇಯವನ್ನು ಇಟ್ಟುಕೊಂಡು ಮುಂದುವರಿಸುತ್ತಾ ಬಂದಿದೆ. ಇಲಿ ರಾಷ್ಟ್ರೀಯತೆಯನ್ನು ಕಲಿಸಿಕೊಡುತ್ತದೆ. ಕನ್ನಡವನ್ನು ಮೂಲೆ ಗುಂಪಾಗಿಸುತ್ತಿರುವ ಈ ಕಾಲಘಟ್ಟದಲ್ಲಿ ಶ್ರೀರಾಮ ಶಾಲೆಯು 1000ಕ್ಕೂ ಅಧಿಕ ಮಕ್ಕಳನ್ನು ಹೊಂದಿದ್ದು ಭಾಷಾ ಮಾಧ್ಯಮದಲ್ಲೆ ಹೆಚ್ಚು ಮಕ್ಕಳನ್ನು ಹೊಂದಿದ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ| ಪ್ರಭಾಕರ ಭಟ್ ಕಲ್ಲಡ್ಕ ತಮ್ಮ ಪ್ರಾಸ್ತಾವಿಕ ನುಡಿಗಳಲ್ಲಿ ಹೇಳಿದರು.

 
ಕಾರ್ಯಕ್ರಮದ ಮೊದಲಿಗೆ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು. ನಂತರ ಅತಿಥಿ ಗಣ್ಯರಿಂದ ಭಾರತ ಮಾತೆಗೆ ದೀಪ ಪ್ರಜ್ವಲನೆ ನಡೆಯಿತು. ನೂತನವಾಗಿ ಸೇರ್ಪಡೆಗೊಂಡ ವಿದ್ಯಾರ್ಥಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಕರೆತರಲಾಯಿತು. ಅವರಿಗೆ ಅಧ್ಯಾಪಕ ವೃಂದದವರು ಆರತಿ, ಅಕ್ಷತೆ ಹಾಗೂ ತಿಲಕಧಾರಣೆ ಮಾಡಿ ಸಿಹಿ ನೀಡಿದರು. ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಘೃತಾಹುತಿಯನ್ನು ಮಾಡಿದ ನಂತರ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹಿರಿಯರಿಂದ ಆರ್ಶೀವಾದ ಪಡೆದರು. ನಂತರ 2019-20ನೇ ಶೈಕ್ಷಣಿಕ ವರುಷದಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಬೆನ್ನು ಮೂಳೆ ತಜ್ಞರಾದ ಡಾ|ಈಶ್ವರಕೀರ್ತಿ, ಕುಂದಾಪುರ ತಾಲೂಕಿನ ಬೆಳ್ವೆಯ ಉದ್ಯಮಿಗಳು ಶ್ರೀ ಗಣೇಶ್‌ಕಿಣಿ, ಬೆಳ್ವೆ, ಹಾಸನದ ವಕೀಲರಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಾಜ ಆಲೂರು, ಐ.ಟಿ ವರ್ಲ್ಡ್ಬೆಂಗಳೂರು ಇದರ ನಿರ್ದೇಶಕರಾದ ಮಂಜುನಾಥ ವಿ.ನವಮಂಗಳೂರು ಬಂದರು ಇದರ ಆಡಳಿತ ಮಂಡಳಿಯ ಸಹಾಯಕ ನಿರ್ದೇಶಕರಾದ ಪ್ರಾಂಜಲ್ ಸುಧೀರ್‌ ಘಾಟೆ, ಉದ್ಯಮಿಗಳಾದ ರಾಜೇಶ್ ಶ್ಯಾನ್‌ಬಾಗ್ ಮಣಿಕರ, ಸರಕಾರಿ ಪ್ರಥಮದರ್ಜೆ ಕಾಲೇಜು, ಉನ್ನತ ಶಿಕ್ಷಣ ಇಲಾಖೆ ಕರ್ನಾಟಕ, ಇಲ್ಲಿನ ಸಹಾಯಕ ಪ್ರಾಧ್ಯಾಪಕರಾದ ಡಾ| ಶೈಲಜಾ ವಿ,ಶ್ರೀರಾಮ ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಾಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್, ಆಡಳಿತ ಮಂಡಳಿಯ ಸದಸ್ಯರಾದ ಕಮಲಾ ಪ್ರಭಾಕರ್ ಭಟ್, ಹಾಗೂ ಮುಖ್ಯೋಪಾಧ್ಯಾಯರಾದ ರವಿರಾಜ್‌ ಕಣಂತೂರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿಗಳಾದ ಭೂಷಣ್ ಹಾಗೂ ಆದಿಶ್ರೀ ನಿರೂಪಿಸಿ, ವಾಸವಿ ಸ್ವಾಗತಿಸಿ, ದೀಕ್ಷಾಧನ್ಯವಾದ ಸಮರ್ಪಿಸಿದರು.

More from the blog

ಸ್ವಿಮ್ಮಿಂಗ್​ ಪೂಲ್​ ನೀರಿಗೆ ಬಿದ್ದು 4ನೇ ತರಗತಿ ವಿದ್ಯಾರ್ಥಿ ಸಾವು

ಉಡುಪಿ‌: ಸ್ವಿಮ್ಮಿಂಗ್​ ಫೂಲ್​ನಲ್ಲಿ ಮುಳುಗಿ 4ನೇ ತರಗತಿಯ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಕುಂದಾಪುರ ತಾಲೂಕಿನ ಹೆಂಗವಳ್ಳಿ ಸಮೀಪದ ಟಿನ್ ಟಾನ್ ಎನ್ವೆಂಚರ್ಸ್ ರೆಸಾರ್ಟ್​​ನಲ್ಲಿ ನಡೆದಿದೆ. ಉಡುಪಿ‌ಯ ಹೊಡೆ ಮೂಲದ ಮುಹಮ್ಮದ್ ಅರೀಝ್ ಮೃತ ವಿದ್ಯಾರ್ಥಿ. ದಾರುಸ್ಸಲಾಮ್...

ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣ : ನಿದ್ದೆಯಲ್ಲಿದ್ದ ಉಗ್ರರನ್ನು ಬಡಿದೆಬ್ಬಿಸಿದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆ ಬ್ಲಾಸ್ಟ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಷ್ಟ್ರೀಯ ತನಿಖಾ ಸಂಸ್ಥೆ ಭರ್ಜರಿ ಕಾರ್ಯಾಚರಣೆ ನಡೆಸಿ, ಉಗ್ರರ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ರಾಮೇಶ್ವರಂ ಕೆಫೆ ಬಾಂಬರ್‌ ಗ್ಯಾಂಗ್ ಬಂಧಿಸಲು NIA ಭರ್ಜರಿ ಬಲೆ...

ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೆ..ಮಹಾರಥೋತ್ಸವ ಕಣ್ಣುಂಬಿಕೊಂಡ ಸಾವಿರಾರು ಭಕ್ತರು

ಬಂಟ್ವಾಳ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯಲ್ಲಿ ಎ. ೧೧ರಂದು ಸಂಜೆ ರಥೋತ್ಸವ ನಡೆಯಿತು. ಜಾತ್ರೆಯಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು. ಮಹಾಪೂಜೆಯ ಬಳಿಕ ದೇವರು ರಥಾರೋಹಣಗೊಂಡು ಸಾಂಕೇತಿಕವಾಗಿ ರಥವನ್ನು ಎಳೆಯಲಾಯಿತು. ಮಧ್ಯಾಹ್ನ ರಥಕ್ಕೆ...

ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ ಭೇಟಿ ನೀಡಿ ಮತಯಾಚನೆ ನಡೆಸಿದ ಶಾಸಕ ರಾಜೇಶ್ ನಾಯ್ಕ್

ಲೋಕ ಸಭಾ ಚುನಾವಣೆಯ ಹಿನ್ನಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ಅವರ ಗೆಲುವಿಗಾಗಿ "ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಗ್ರಾಮ,ಮನೆ,ಮನ ಸಂಪರ್ಕ ಅಭಿಯಾನ"ದ ಅಂಗವಾಗಿ ಬಂಟ್ವಾಳದ ಬಡಗಕಜೆಕಾರು, ತೆಂಕಕಜೆಕಾರು ಗ್ರಾಮದಲ್ಲಿ ಮತದಾರರ ಮನೆಗೆ...