ಬಂಟ್ವಾಳ: ಮಾ.15 ಕಾಂಗ್ರೆಸ್ ಹಿರಿಯ ನೇತಾರರೂ, ಸಾಮಾಜಿಕ ಧಾರ್ಮಿಕ ನಾಯಕರಾದ ದಿ|ಬಿ ಸದಾನಂದ ಪೂಂಜರವರ ಮನೆಗೆ ಮಂಗಳೂರು ಶಾಸಕರೂ ಮಾಜಿ ಸಚಿವರಾದ ಯು ಟಿ ಖಾದರ್ ಹಾಗೂ ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆಯವರು ಭೇಟಿ ನೀಡಿ ಸದಾನಂದ ಪೂಂಜರವರ ಪುತ್ರರಾದ ಪ್ರಸಾದ್ ಪೂಂಜಾ, ಶೋಭಿತ್ ಪೂಂಜಾ ಮತ್ತು ಕುಟುಂಬ ವರ್ಗಕ್ಕೆ ಸಾಂತ್ವನ ತಿಳಿಸಿದರು.
ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಪ್ರವೀಣ್ ಆಳ್ವ, ಇರಾ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಅಬ್ದುಲ್ ರಝಕ್ ಕುಕ್ಕಾಜೆ, ಕಾಂಗ್ರೆಸ್ ಮುಖಂಡರಾದ ದಿನೇಶ್ ಆಳ್ವ ಉಳ್ಳಾಲ, ಕಿಶೋರ್ ದೇರಾಜೆ, ಸಜೀಪ ಮೂಡ ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಬ್ದುಲ್ ಕರೀಂ ಇನ್ನಿತರರು ಈ ಸಂಧರ್ಭದಲ್ಲಿ ಉಪಸ್ಥಿತರಿದ್ದರು.