Friday, April 19, 2024

ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಿ.ಸದಾನಂದ ಪೂಂಜ ಇನ್ನಿಲ್ಲ

ಬಂಟ್ವಾಳ: ದ.ಕ.ಜಿ.ಪಂ.ಮಾಜಿ ಅಧ್ಯಕ್ಷ, ಹಿರಿಯ ಕಾಂಗ್ರೆಸ್ ಮುಂದಾಳು ಬಿ.ಸದಾನಂದ ಪೂಂಜ(80) ಅವರು ಮಾ. 13ರಂದು ಅಲ್ಪಕಾಲದ ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಸಜೀಪಮೂಡ ಗ್ರಾಮದ ಅಭಿವೃದ್ಧಿಯ ರೂವಾರಿಗಳಾಗಿ ಗುರುತಿಸಿಕೊಂಡಿದ್ದ ಅವರು, ಸಜೀಪಮಾಗಣೆಯ ಆಡಳಿತದಾರರಾಗಿದ್ದರು. ಕಾಂಗ್ರೆಸ್ ಪಕ್ಷದಲ್ಲಿ ಸಕ್ರೀಯರಾಗಿದ್ದು, ದ.ಕ.ಜಿಲ್ಲಾ ಕಾಂಗ್ರೆಸ್‌ನ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದರು. ಸುಭಾಷ್‌ನಗರ ಶಾರದೋತ್ಸವ ಸಮಿತಿ, ಸುಭಾಷ್ ಯುವಕ ಮಂಡಲದ ಸ್ಥಾಪಕಾಧ್ಯಕ್ಷರಾಗಿ, ಸಜೀಪಮೂಡದಲ್ಲಿ ಸರಕಾರಿ ಪ.ಪೂ.ಕಾಲೇಜು ಸ್ಥಾಪನೆಗೆ ಪ್ರಮುಖ ಕಾರಣರಾಗಿದ್ದರು.

ತಾಲೂಕು ಬೋರ್ಡ್ ಉಪಾಧ್ಯಕ್ಷರಾಗಿ, ರಾಜ್ಯ ಪರಿಸರ ನಿಯಂತ್ರಣ ಮಂಡಳಿಯ ಸದಸ್ಯರಾಗಿ, ಮಂಡಲ ಹಾಗೂ ಗ್ರಾ.ಪಂ.ಅಧ್ಯಕ್ಷರಾಗಿ, ಈಶ್ವರಮಂಗಲ ದೇವಸ್ಥಾನದ ಅಭಿವೃದ್ಧಿಯ ರೂವಾರಿಗಳಾಗಿ ಹೀಗೆ ಹತ್ತು ಹಲವು ಧಾರ್ಮಿಕ, ಸಾಮಾಜಿಕ ಸಂಘಟನೆಗಳಲ್ಲಿ ಸಕ್ರೀಯರಾಗಿದ್ದರು. ಇಂದು ಸಂಜೆ (ಮಾ.13) ಸಜೀಪಮೂಡ ಸುಭಾಷ್‌ನಗರದಲ್ಲಿರುವ ಅವರ ಮನೆ ಶಾಂತಿ ನಿಕೇತನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಪುತ್ರ ದೇವಿಪ್ರಸಾದ್ ಪೂಂಜ ತಿಳಿಸಿದ್ದಾರೆ.

More from the blog

ಜನಪರವಾದ ಕೆಲಸ ಮಾಡದ ಬಿಜೆಪಿಗೆ ಸೋಲು ಖಚಿತ-ಚಾಮರಸ ಮಾಲೀಪಾಟೀಲ್

ಬಂಟ್ವಾಳ: 2024 ರ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮಿತ್ರಪಕ್ಷವನ್ನು ಸೋಲಿಸುವ ತೀರ್ಮಾನವನ್ನು ಕರ್ನಾಟಕ ರಾಜ್ಯ ರೈತ ಸಂಘ ಮಾಡಿದ್ದು, ಈ ದೃಷ್ಟಿಯಿಂದ ರೈತರ ಮನವೊಲಿಸುವ ಕಾರ್ಯದಲ್ಲಿ ತೊಡಗಿದ್ದೇವೆ, ಈ ಬಾರಿ ಬಿಜೆಪಿ ನೆಲಕಚ್ಚುವುದು...

ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ಭೇಟಿ

ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 17-ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ರವರು ದಿನಾಂಕ 19-04-2024 ರಂದು ಬಂಟ್ವಾಳ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಭೇಟಿ ನೀಡಿದರು. ಸೂಕ್ಷ್ಮ ಮತಗಟ್ಟೆಗಳಿರುವ ಪ್ರದೇಶಗಳಿಗೆ...

ಏ.21ರಂದು ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ

ಮತದಾರರನ್ನು ಮತಗಟ್ಟೆಗೆ ಸೆಳೆಯುವ ಸಲುವಾಗಿ ಚುನಾವಣಾ ಆಯೋಗ ಸ್ವೀಪ್ ಕಾರ್ಯಕ್ರಮದ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಅದರಂತೆ ಎ.21ರಂದು ಎಲ್ಲಾ ಬೂತ್ ಮತಗಟ್ಟೆಗಳಲ್ಲಿ ನಮ್ಮ ನಡೆ ಮತಗಟ್ಟೆಯ ಕಡೆ ಅಭಿಯಾನ ಹಮ್ಮಿಕೊಂಡಿದ್ದು, ಬಂಟ್ವಾಳ...

ನೇತ್ರಾವತಿ ನದಿ ತೀರದ ಕೃಷಿಕರ ಪಂಪ್ ಸೆಟ್ ಗಳ ವಿದ್ಯುತ್ ಸ್ಥಗಿತ : ರೈತರಿಂದ ಪ್ರತಿಭಟನೆ

ಬಂಟ್ವಾಳ: ದ.ಕ.ಜಿಲ್ಲಾಡಳಿತವೂ ಮಂಗಳೂರು ನಗರಕ್ಕೆ ಕುಡಿಯುವ ನೀರು ಕೊರತೆಯಾಗುತ್ತಿದೆ ಎಂದು ನೇತ್ರಾವತಿ ನದಿ ಪಾತ್ರದ ಕೃಷಿ ಪಂಪ್ ಸೆಟ್ ಗಳ ವಿದ್ಯುತ್ ಕಡಿತ ಮಾಡಿರುವ ವಿರುದ್ಧ ರೈತರು ಬಂಟ್ವಾಳ ತಾಲೂಕು ಆಡಳಿತ ಸೌಧದ...