ಬಂಟ್ವಾಳ: ಮಾ.11ಕುಲಾಲ ಸೇವಾ ಸಂಘ(ರಿ) ಮಾಣಿ ಇದರ ಆಶ್ರಯದಲ್ಲಿ ಸ್ವಜಾತಿ ಭಾಂದವರ ಕುಲಾಲ ಕ್ರೀಡಾ ಕೂಟ ಪೆರಾಜೆ ಶಾಲಾ ಮೈದಾನದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕೃಷಿಕ ಮೋಹನ್ ಕಜೆಯವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಕ್ರೀಡೆ ಆರೋಗ್ಯ ದೃಷ್ಟಿಯಿಂದ ಎಷ್ಟು ಮುಖ್ಯವೋ ಸಂಘನೆಯ ಬಲವರ್ಧನೆಯ ದೃಷ್ಟಿಯಿಂದ ಕೂಡ ಅಷ್ಟೇ ಮುಖ್ಯ. ಸಮುದಾಯದ ಪ್ರತಿಯೊಂದು ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಘಟನೆ ಬಲಪಡಿಸಿ ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕುಲಾಲ ಸೇವಾ ಸಂಘ ಮಾಣಿ ಇದರ ಅಧ್ಯಕ್ಷರಾದ ಭೋಜ ನಾರಾಯಣ, ಗೌರವ ಅಧ್ಯಕ್ಷರಾದ ರಾಮಚಂದ್ರ ಹಾಗೂ ಕಾರ್ಯದರ್ಶಿ ಪದ್ಮನಾಭ ಪೆರಾಜೆ, ಕ್ರೀಡಾ ಕಾರ್ಯದರ್ಶಿ ದೀಪಕ್ ಉಪಸ್ಥಿತರಿದ್ದರು.
ಮಾಣಿ ವಲಯದ 9 ಗ್ರಾಮಗಳ ಗ್ರಾಮವಾರು ತಂಡಗಳ ಕ್ರೀಡಾಕೂಟ ಇದಾಗಿದ್ದು, ಪುರುಷರಿಗಾಗಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್ ಹಗ್ಗಜಗ್ಗಾಟ ಹಾಗೂ ಮಹಿಳೆಯಾರಿಗಾಗಿ ಥ್ರೋ ಬಾಲ್, ಬಾಲ್ ಪಾಸಿಂಗ್, ಹಗ್ಗಜಗ್ಗಾಟ ಮತ್ತು ಇತರೆ ವ್ಯಯಕ್ತಿಕ ಆಟಗಳನ್ನು ಅಯೋಜಿಸಲಾಗಿತ್ತು.