ಬಂಟ್ವಾಳ: ದುಬೈನಲ್ಲಿ ನಾಪತ್ತೆಯಾಗಿದ್ದ ಬಂಟ್ವಾಳ ತಾಲೂಕಿನ ನರ್ಶಾ ಬೋಳಂತೂರಿನ 35 ವರ್ಷದ ವ್ಯಕ್ತಿ ಶವ ಪತ್ತೆಯಾಗಿದೆ ಮೃತ ವ್ಯಕ್ತಿಯನ್ನು ಮುತಾಲಿಬ್ ಎಂದು ಗುರುತಿಸಲಾಗಿದೆ.
ಕೆಲದಿನಗಳ ಹಿಂದೆ ನಾಪತ್ತೆಯಾಗಿದ್ದ ಮುತಾಲಿಬ್‌ನ ಮೊಬೈಲ್ ಸ್ವಿಚ್ ಆಫ್ ಆಗಿತ್ತು ಇದು ಕುಟುಂಬಸ್ಥರ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಆತನ ಶವ ಪತ್ತೆಯಾಗಿದೆ ಎಂದು ದುಬೈ ಪೊಲೀಸರು ಸ್ಪಷ್ಟಪಡಿಸಿದ್ದಾರೆ ಭಾನುವಾರ ಆಲ್ ರಫಾದಲ್ಲಿ ಶವ ಪತ್ತೆಯಾಗಿದ್ದು, ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ.
ಪಾಸ್ ಪೋರ್ಟ್ ಆಧಾರದ ಮೇಲೆ ಭಾರತೀಯ ಪ್ರಜೆ ಎಂದು ಗುರುತಿಸಿ ಪೊಲೀಸರು ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಿದ್ದಾರೆ ಸದ್ಯ ಶವವನ್ನು ದುಬೈ ರಶೀದ್ ಆಸ್ಪತ್ರೆಯಲ್ಲಿಡಲಾಗಿದೆ. ಮುತಾಲಿಬ್ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುತ್ತಿದ್ದರು. ಮದರಸಾದಲ್ಲಿ ಧಾರ್ಮಿಕ ಪಾದ್ರಿಯಾಗಿ ಸೇವೆ ಸಲ್ಲಿಸಿದ್ದರು ನಂತರ ಎಂಜಿನಿಯರಿಂಗ್ ಮುಗಿಸಿ ದುಬೈನಲ್ಲಿ ಕೆಲಸ ಪಡೆದಿದ್ದರು. ಇವರ ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ.