ಬಂಟ್ವಾಳ: ಮಾ.9: ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಸರಬರಾಜು ಯೋಜನೆಯಡಿ 38.70 ಕೋ.ರೂ.ವೆಚ್ಚದಲ್ಲಿ ಅನುಷ್ಠಾನಗೊಂಡು 23 ಗ್ರಾಮಗಳಿಗೆ ಒಳಪಟ್ಟ ಸರಪಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಸೋಮವಾರ ಬಂಟ್ವಾಳ ತಾ.ಪಂ.ಅಧ್ಯಕ್ಷ ಚಂದ್ರಹಾಸ ಕರ್ಕೇರ ಅವರ ನೇತೃತ್ವದ ನಿಯೋಗದೊಂದಿಗೆ ವೀಕ್ಷಿಸಿದರು.
ತಾ.ಪಂ.ಉಪಾಧ್ಯಕ್ಷ ಅಬ್ಬಾಸ್ ಆಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಮಲ್ಲಿಕಾ ವಿ.ಶೆಟ್ಟಿ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ್ ಜೈನ್ ನಿಯೋಗದಲ್ಲಿದ್ದರು. ಈ ವೇಳೆ ಮಾಜಿ ಸಚಿವರು ಪಂಚಾಯತ್‌ರಾಜ್ ಇಲಾಖೆಯ ಕಿರಿಯ ಎಂಜಿನಿಯರ್ ಕೃಷ್ಣ ಅವರಿಂದ ಮಾಹಿತಿ ಪಡೆದು, ಕುಡಿಯುವ ನೀರಿನ ಈ ಘಟಕದ ಕಾಮಗಾರಿ ಪೂರ್ಣಗೊಂಡಿದ್ದು, ಈ ಯೋಜನೆಯು ನನ್ನ ಜೀವನದ ಕನಸಿನ ಯೋಜನೆಯಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಬೇಬಿ ಕುಂದರ್, ಬಂಟ್ವಾಳ ಪುರಸಭಾ ಸದಸ್ಯ ಜನಾರ್ದನ ಚಂಡ್ತಿಮಾರ್, ತಾ.ಪಂ.ಮಾಜಿ ಸದಸ್ಯ ಸಂಪತ್‌ಕುಮಾರ್ ಶೆಟ್ಟಿ, ತಾ.ಪಂ.ಮಾಜಿ ಉಪಾಧ್ಯಕ್ಷೆ ಕಾಂಚಲಾಕ್ಷಿ, ಗ್ರಾ.ಪಂ.ಸದಸ್ಯರಾದ ವಿನ್ಸೆಂಟ್ ಪಿಂಟೋ, ಬಾಲಕೃಷ್ಣ ಪೂಜಾರಿ, ಯೋಗೀಶ್ ಶೆಟ್ಟಿ, ಶಿವಪ್ಪ ಪೂಜಾರಿ ಹಟ್ಟದಡ್ಕ, ಪ್ರೆಸಿಲ್ಲಾ, ರೇಷ್ಮಾ ದಿವಾಕರ ಪೂಜಾರಿ, ಪ್ರಮುಖರಾದ ಸತೀಶ್ ಪೂಜಾರಿ, ಬಾಲಕೃಷ್ಣ ಕೊಟ್ಟುಂಜ, ಸದಾನಂದ ಶೆಟ್ಟಿ ಕಾವಳಕಟ್ಟೆ, ಬಿ.ಆರ್.ಅಂಚನ್, ಮಮತಾ ದಿನೇಶ್ ಜತೆಗಿದ್ದರು.