Tuesday, October 31, 2023

ಗಡಿಯಲ್ಲಿ ನಿಂತು ದೇಶವನ್ನು ರಕ್ಷಿಸುವ ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಖಂಡಿತವಾಗಿಯೂ ಇದೆ : ಅಕ್ಷತಾ ಬಜ್ಪೆ

Must read

ಬಂಟ್ವಾಳ: ಮಾ.09ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬಂಟ್ವಾಳದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಸಿದ್ದಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ಆಚರಿಸಲಾಯಿತು ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉರ್ದ್ಘಾಟಿಸಿ ಮಾತಾನಾಡಿದ ಅನಂತ ಪದ್ಮ ಹೆಲ್ತ್ ಸೆಂಟರ್ ಸಿದ್ದಕಟ್ಟೆ ಇಲ್ಲಿಯ ವೈದ್ಯರಾದ ಡಾ.ಸೀಮಾ ಸುದೀಪ್ ಮಾನಸಿಕ ಒತ್ತಡದಿಂದ ವಿಮುಕ್ತರಾಗುವ ಮೂಲಕ ಮಹಿಳಾ ಸಬಲೀಕರಣ ಸಾದ್ಯ ಎಂದರು.


ಮುಖ್ಯ ಭಾಷಣಕಾರರಾದ, ಎಬಿವಿಪಿ ಹಿರಿಯ ಕಾರ್ಯಕರ್ತರಾದ ಅಕ್ಷತಾ ಬಜ್ಪೆ ಮಾತಾನಾಡಿ, ಅವಕಾಶ ಮತ್ತು ಆಯ್ಕೆ ನಮ್ಮ ಕೈಯಲ್ಲಿಯೇ ಇದೆ. ಗಡಿಯಲ್ಲಿ ನಿಂತುಕೊಂಡು ದೇಶವನ್ನು ರಕ್ಷಿಸುವ ಹೆಣ್ಣಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವ ಶಕ್ತಿ ಖಂಡಿತವಾಗಿಯೂ ಇದೆ. ಅದಕ್ಕಾಗಿ ಹೆಣ್ಣು ದೈಹಿಕವಾಗಿ ಮತ್ತು ಮಾನಸಿಕವಾಗಿ ತಯಾರಾಗಬೇಕಾಗಿದೆ, ವಿದ್ಯಾರ್ಥಿನಿಯರು ಅವಕಾಶಗಳ ಬೆನ್ನತ್ತಿ ಹೋದಾಗ ಸಾಧನೆಯ ಶಿಖರವನ್ನೇರಲು ಸಾದ್ಯ ಎಂದರು.


ಈ ಸಂದರ್ಭದಲ್ಲಿ ರಾಷ್ಟ್ರೀಯ ಕ್ರೀಡಾಪಟು ಇತ್ತೀಚೆಗೆ ಅಸ್ಸಾಂನ ಗುವಾಹಟಿಯಲ್ಲಿ ನಡೆದ 32ನೇ ರಾಷ್ಟ್ರೀಯ ಮಟ್ಟದ ಅಥ್ಲೇಟಿಕ್ ಚಾಂಪಿಯನ್ ಶಿಪ್ಲ್ಲಿ 44.46  ಮೀ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಪಡೆದ ಸಿದ್ದಕಟ್ಟೆ ಗುಣಶ್ರೀ ವಿದ್ಯಾಲಯದ ವಿದ್ಯಾರ್ಥಿನಿ ಕು.ರಮ್ಯಶ್ರೀ ಜೈನ್ ಇವರನ್ನು ಸನ್ಮಾನಿಸಲಾಯಿತು. ಬಂಟ್ವಾಳ ನಗರ ವಿದ್ಯಾರ್ಥಿನಿ ಪ್ರಮುಖ್ ರೇಶ್ಮಾ, ಹಾಗೂ ಸಿದ್ದಕಟ್ಟೆ ನಗರ ವಿದ್ಯಾರ್ಥಿನಿ ಪ್ರಮುಖ್ ನಿಶಾ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಯಲಕ್ಮೀ ಸ್ವಾಗತಿಸಿ,ಭಾರತಿ ವಂದಿಸಿದರು, ಚಿತ್ರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು…

More articles

Latest article