ಬಂಟ್ವಾಳ: ಮಾ.08 ಪಾಣೆಮಂಗಳೂರು ನೂರುದ್ದಿನ್ ಜುಮಾ ಮಸ್ಜಿದ್ ಗುಡ್ಡೆಅಂಗಡಿ ಇದರ ವತಿಯಿಂದ ಹಝ್ರುತ್ ಶೈಖ್ ಮೌಲವಿ (ಖ. ಸಿ) ದರ್ಗಾ ಶರೀಫ್ ಕೂಟು ಝಿಯಾರತ್ ಹಾಗೂ 2 ದಿನಗಳ ಧಾರ್ಮಿಕ ಪ್ರವಚನ, ಹಾಗೂ ಊರುಸ್ ಕಾರ್ಯಕ್ರಮಕ್ಕೆ ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಯವರು ಭೇಟಿ ನೀಡಿ ದರ್ಗಾ ಶರೀಫ್ ಗೆ ಚಾದರ ಅರ್ಪಿಸಿದರು.
ಈ ಸಂದರ್ಭದಲ್ಲಿ ಬಂಟ್ವಾಳ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ಧಿಕ್,ರಜಾಕ್ ಕುಕ್ಕಾಜೆ,ಶರೀಫ್ ಬುಯ್ಯಾ, ಹಮ್ಮದ್ ಹಾಜಿ, ಮೊಹಮ್ಮದ್ ಸಜೀಪ,ಅಬೂಬಕ್ಕರ್ ಮೆಲ್ಕಾರ್, ಉಮಾರುಲ್ ಪಾರುಕ್, ಆಸೀಫ್ ಖತರ್, ಝಖರಿಯಾ ಖತರ್ , ಕೈಫ್ ಗುಡ್ಡೆಅಂಗಡಿ ಮೊದಲಾದವರು ಉಪಸ್ಥಿತರಿದ್ದರು.