ಕರ್ನಾಟಕದ ಬಾಗಲಕೋಟೆಯಲ್ಲಿ ನಡೆದ ರಾಜ್ಯಮಟ್ಟದ ವುಶು ಕ್ರೀಡಾಕೂಟದಲ್ಲಿ ದಕ್ಷಿಣ ಕನ್ನಡ ವುಶು ಸಂಸ್ಥೆಯನ್ನು ಪ್ರತಿನಿಧಿಸಿದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಎಂಡ್ ಮಾರ್ಷಲ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿಗಳಾದ ಆವ್ನಿ ಎನ್ ಮುಡಿಪು (45 ಕೆ.ಜಿ ವಿಭಾಗ) ಅನ್ಶಿ ಎನ್ ಮುಡಿಪು (48 ಕೆ.ಜಿ ವಿಭಾಗ) ಸಬ್ ಜೂನಿಯರ್ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದು ಮಾರ್ಚ್ 21 ರಿಂದ 26 ರ ವರೆಗೆ ಜಾರ್ಖಂಡ್ ನ ರಾಂಚಿಯಲ್ಲಿ ನಡೆಯುವ ರಾಷ್ಟ್ರದ ಮಟ್ಟದ ಕ್ರೀಡಾಕೂಟದಲ್ಲಿ ಕರ್ನಾಟಕ ವುಶು ತಂಡವನ್ನು ಪ್ರತಿನಿಧಿಸಲಿದ್ದಾರೆ ಇವರು ಸಂಸ್ಥೆಯ ಮುಖ್ಯಶಿಕ್ಷಕರಾದ ನಿತಿನ್ ಎನ್ ಸುವರ್ಣ ಇವರಿಂದ ತರಬೇತಿಯನ್ನು ಪಡೆಯುತ್ತಿದ್ದಾರೆ. ಇವರು ಎಮ್.ಆರ್.ಪಿ.ಎಲ್ ಉದ್ಯೋಗಿಯಾದ ಶ್ರೀ ನಿರಂಜನ್ ಮುಡಿಪು ಮತ್ತು ಶ್ರೀಮತಿ ಸ್ವರ್ಣ ದಂಪತಿಗಳ ಅವಳಿ ಪುತ್ರಿಯರು.