ಬಂಟ್ವಾಳ: ಇಲ್ಲಿನ ಸ್ವರ್ಣೋದ್ಯಮಿಗಳಾದ ವಿ.ಎನ್.ಆರ್. ಗೋಲ್ಡ್ ವತಿಯಿಂದ ನಾಗೇಂದ್ರ ಬಾಳಿಗಾ ಅವರ ನೇತೃತ್ವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಅಭಿನಂದಿಸುವ ಕಾರ್ಯ ಶನಿವಾರ ರಾತ್ರಿ ವಿ.ಎನ್.ಆರ್. ಗೋಲ್ಡ್ ಹಿಂದುಗಡೆಯ ಪ್ರಾಂಗಣದಲ್ಲಿ ನಡೆದ ಸಮಾರಂಭದಲ್ಲಿ ನಡೆಯಿತು.
ಈ ಸಂದರ್ಭ ಬಂಟ್ವಾಳ ವೃತ್ತನಿರೀಕ್ಷಕ ಟಿ.ಡಿ.ನಾಗರಾಜ್, ಸರ್ಕಾರಿ ಆಸ್ಪತ್ರೆಯ ನಿವೃತ್ತ ವೈದ್ಯಾಧಿಕಾರಿ ಡಾ. ಸುರೇಂದ್ರ ನಾಯಕ್, ಹೆಡ್ ಕಾನ್ಸ್ ಟೇಬಲ್ ಉದಯ ರೈ ಮಂದಾರ, ಸೇವ್ ಲೈಫ್ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಅರ್ಜುನ್ ಭಂಡಾರ್ಕಾರ್ ಅವರನ್ನು ಸನ್ಮಾನಿಸಲಾಯಿತು.ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬಂಟ್ವಾಳ ಉಪವಿಭಾಗ ಡಿವೈಎಸ್ಪಿ ವೆಲಂಟೈನ್ ಡಿಸೋಜ, ಪೊಲೀಸರು ಮತ್ತು ಸಾರ್ವಜನಿಕರ ಸಂಬಂಧವೃದ್ಧಿಗೆ ಇಂಥ ಕಾರ್ಯಕ್ರಮಗಳು ಸಹಕಾರಿ ಎಂದರು.ಅತಿಥಿಗಳಾಗಿ ಬಂಟ್ವಾಳ ನಗರ ಠಾಣೆ ಪೊಲೀಸ್ ನಿರೀಕ್ಷಕ ಚೆಲುವರಾಜ್, ಬಂಟ್ವಾಳ ನಗರ ಠಾಣೆ ಎಸ್.ಐ. ಅವಿನಾಶ್ ಗೌಡ, ಗ್ರಾಮಾಂತರ ಠಾಣೆ ಎಸ್.ಐ. ಪ್ರಸನ್ನ ಕೆ, ಸಂಚಾರಿ ಠಾಣೆ ಎಸ್.ಐ. ರಾಜೇಶ್ ಎ.ಕೆ, ವಿಟ್ಲ ಠಾಣೆ ಎಸ್.ಐ. ವಿನೋದ್ ರೆಡ್ಡಿ, ಪುಂಜಾಲಕಟ್ಟೆ ಎಸ್.ಐ. ಸೌಮ್ಯಾ, ನಾಗೇಂದ್ರ ಬಾಳಿಗಾ ಅವರ ತಾಯಿ ರಮಣಿ ವಿ.ಬಾಳಿಗಾ, ಪತ್ನಿ ವಿದ್ಯಾ ಬಾಳಿಗಾ ಉಪಸ್ಥಿತರಿದ್ದರು. ಅಜೇಯ ಬಾಳಿಗಾ ಸ್ವಾಗತಿಸಿದರು.
ನಾಗೇಂದ್ರ ಬಾಳಿಗಾ ಅವರು ಕಾರ್ಯಕ್ರಮದ ಉದ್ದೇಶಗಳನ್ನು ವಿವರಿಸಿ ವಂದಿಸಿದರು. ಮಂಜು ವಿಟ್ಲ ಮತ್ತು ನಾರಾಯಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಬಂಟ್ವಾಳ ಡಿವೈಎಸ್ಪಿ ವೆಲಂಟೈನ್ ಡಿಸೋಜ ಅವರ ಜನ್ಮದಿನವನ್ನು ಆಚರಿಸಲಾಯಿತು. ಬಳಿಕ ಸಂಗೀತ ರಸಮಂಜರಿ ನಡೆಯಿತು.