ಬಂಟ್ವಾಳ: ಪ್ರಶಸ್ತಿ ಪಡೆಯುವುದರಿಂದ ಒಬ್ಬ ವ್ಯಕ್ತಿಯ ಸಾಮಾಜಿಕ ಬದ್ಧತೆ ಕಳಕಳಿ ಮತ್ತು ಜವಾಬ್ದಾರಿ ಮತ್ತಷ್ಟು ಹೆಚ್ಚಾಗುತ್ತದೆ. ಗೃಹರಕ್ಷಕ ದಳದಲ್ಲಿ ಕೆಲಸ ಮತ್ತು ನಿಷ್ಕಲ್ಮಶ ಸೇವೆಯಿಂದ ಮಾನಸಿಕ ನೆಮ್ಮದಿ ಮತ್ತು ಸಂತೃಪ್ತಿ ಹೆಚ್ಚಿದೆ. ಈ ಪ್ರಶಸ್ತಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೃಹರಕ್ಷಕರಿಗೆ ಸಲ್ಲತಕ್ಕದ್ದು ಎಂದು2019ನೇ ಸಾಲಿನ ಮುಖ್ಯಮಂತ್ರಿಗಳ ಪದಕ ಪುರಸ್ಕೃತ ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀಮೋಹನ್ ಚೂಂತಾರು ಅಭಿಪ್ರಾಯಪಟ್ಟರು.
ದಿನಾಂಕ: 05-03-2021ನೇ ಶುಕ್ರವಾರದಂದು ನಗರದ ಆಡಂಕುದ್ರುವಿನ ಸೈಂಟ್ ಸೆಬಾಸ್ಟಿನ್ ಶಾಲೆಯ ಅಂಗಣದಲ್ಲಿ ಹೊಸದಾಗಿ ರಚಿತವಾದ ಉಳ್ಳಾಲ ಘಟಕದ ವಾರದ ಕವಾಯತನ್ನು ಉದ್ದೇಶಿಸಿ ಡಾ|| ಮುರಲೀಮೋಹನ್ ಚೂಂತಾರು ಅವರು ಮಾತನಾಡುತ್ತಿದ್ದರು. ಇದೇ ಸಂದರ್ಭದಲ್ಲಿ ಸಮಾದೇಷ್ಟರಾದ ಡಾ|| ಚೂಂತಾರು ಅವರಿಗೆ ಉಳ್ಳಾಲ ಘಟಕದ ವತಿಯಿಂದ ಸನ್ಮಾನ ಮಾಡಲಾಯಿತು. ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದ ಜೂನ್2020ರಲ್ಲಿ ಉಳ್ಳಾಲ ಘಟಕ ಆರಂಭವಾಗಿದ್ದರೂ ವಾರದ ಕವಾಯತನ್ನು ಆರಂಭಿಸಿರಲಿಲ್ಲ. ಈ ಕೋವಿಡ್-19 ನಿಯಂತ್ರಣ ಬಂದ ಬಳಿಕ ವಾರದ ಕವಾಯತನ್ನು ಆರಂಭಿಸಲಾಗಿದೆ. ಈ ಸಂದರ್ಭದಲ್ಲಿ ಹಿರಿಯ ಗೃಹರಕ್ಷಕರಾದ ಭಾಸ್ಕರ್, ಬಶೀರ್, ಸುನಿಲ್ ಕುಮಾರ್, ಸುನಿಲ್ ಪೂಜಾರಿ, ದಿವಾಕರ್, ಹಮೀದ್ ಪಾವಳ ಉಪಸ್ಥಿತರಿದ್ದರು. ಘಟಕಾಧಿಕಾರಿ ಸುರೇಶ್ ಶೇಟ್ ಕವಾಯತನ್ನು ನಿರ್ವಹಿಸಿದರು.