ಬಂಟ್ವಾಳ: ತಾ.03/03/2019ರಂದು ಶ್ರೀರಾಮ ಪ್ರೌಢಶಾಲೆ, ಕಲ್ಲಡ್ಕದ ಮಧುಕರ ಸಭಾಂಗಣದಲ್ಲಿ ದಕ್ಷಿಣ ಕನ್ನಡ ಜನೌಷಧಿ ಕೇಂದ್ರದ ಮಾಲಕರಿಂದ ನಡೆಸಲ್ಪಟ್ಟ ಮೂರನೇ ವರ್ಷದ ಜನೌಷಧಿ ದಿನಾಚರಣೆಯ ಸಂದರ್ಭದಲ್ಲಿ ಕಂಕನಾಡಿಯ ಜನೌಷಧಿ ಕೇಂದ್ರದ ಮಾಲಕರಾದ ರವೀಶ್‌ರವರು ಜನೌಷಧಿ ಕೇಂದ್ರದ ಸೌಲಭ್ಯದ ಬಗ್ಗೆ ತಿಳಿಸಿದರು. ವಿದ್ಯಾರ್ಥಿಗಳೆಲ್ಲರೂ ಸಾರ್ವಜನಿಕರಿಗೆ ಇದರ ಮಾಹಿತಿಯನ್ನು ತಿಳಿಸಬೇಕೆಂದರು.ವಿದ್ಯಾಸಂಸ್ಥೆಯ ಸಂಚಾಲಕರಾದ ಶ್ರೀಯುತ ವಸಂತ ಮಾಧವ ಜನೌಷಧಿ ಕೇಂದ್ರಗಳಲ್ಲಿ ಕಡಿಮೆ ದರದಲ್ಲಿ ಸಿಗುವಂತಹ ಉತ್ತಮ ಗುಣಮಟ್ಟದ ಔಷಧಿಗಳನ್ನು ಎಲ್ಲರೂ ಪಡೆಯುವಂತಾಗಲಿ ಎಂದು ಆಶಿಸಿದರು.
ವಿಟ್ಲ ಆರೋಗ್ಯ ಕೇಂದ್ರದ ವೈದ್ಯೆಯಾದ ಡಾ| ಶ್ರುತಿಯವರು ವಿದ್ಯಾರ್ಥಿಗಳಿಗೆ ಹದಿಹರೆಯದ ಸಮಸ್ಯೆ ಮತ್ತು ಆರೋಗ್ಯದ ಮಾಹಿತಿಯನ್ನು ನೀಡಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ಶ್ರೀಮತಿ ಸುಧಾ ಕಶೆಕೋಡಿ, ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ವಸಂತಿ ಕುಮಾರಿ ಪಿ ಉಪಸ್ಥಿತರಿದ್ದರು.ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ವಿವಿಧ ಜನೌಷಧಿ ಕೇಂದ್ರಗಳ ಮಾಲಕರಾದ ಸುಳ್ಯದ ಭವಿನ್ ಕುಮಾರ್ ಪಿ, ಗುರುವಾನಕೆರೆಯ ನಿತೀಶ್ ಶೆಟ್ಟಿ, ಅತ್ತಾವರದ ಚಂದ್ರಮೋಹನ್, ನಾಗುರಿಯ ವಿನ್ಸೆಂಟ್, ಬಂಟ್ವಾಳದ ಆಶ್ರಿತ್, ಮಾಣಿಯ ಶ್ರೀಕೃಷ್ಣಪ್ರಸಾದ್, ಸ್ಟೇಟ್‌ಬ್ಯಾಂಕ್‌ನ ಕೆ ನಾಗರಾಜ್ ಹಾಗೂ ತೊಕ್ಕೊಟ್ಟು ಒಳಪೇಟೆಯ ದಿವ್ಯಾ ನವೀನ್ ಉಪಸ್ಥಿತರಿದ್ದರು.
ಈ ಕಾರ್‍ಯಕ್ರಮದಲ್ಲಿ ಜನೌಷಧಿ ಕೇಂದ್ರದ ವತಿಯಿಂದ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಮಾಸ್ಕ್ ಮತ್ತು ವಿದ್ಯಾರ್ಥಿನಿಯರಿಗೆ ಸುವಿಧಾ ಸ್ಯಾನಿಟರಿ ಪ್ಯಾಡ್‌ಗಳನ್ನು ವಿತರಿಸಲಾಯಿತು. ಕಾರ್‍ಯಕ್ರಮವನ್ನು ಕೊಟ್ಟಾರದ ನವೀನ್‌ಚಂದ್ರ, ಮೆಲ್ಕಾರಿನ ಕೃಷ್ಣ ಕಿಶೋರ್ ಪಿ ಹಾಗೂ ಕಲ್ಲಡ್ಕದ ಮನಮೋಹನ ಹೊಳ್ಳ ನಿರ್ವಹಿಸಿದರು.