ಬಂಟ್ವಾಳ: ಮಾ.5 ಕ್ರೀಡಾ ಕ್ಷೇತ್ರ ಜೂಡೋ ಸ್ವರ್ಧೆಯಲ್ಲಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಗೆದ್ದು ಹೆಸರು ಮಾಡಿರುವಂತಹ ಕಲ್ಲಡ್ಕದ ಯುವ ಪ್ರತಿಭೆಗಳಾದ ಶ್ರೀರಾಮ ವಿದ್ಯಾ ಕೇಂದ್ರದ ಹಿರಿಯ ವಿದ್ಯಾರ್ಥಿಗಳಾದ ಶ್ರೀಯುತ ನಿಶ್ಚಿತ್ ಕುಮಾರ್ ಮತ್ತು ಶ್ರೀಯುತ ಧನಂಜಯ್ ಬಾಳ್ತಿಲ ರವರಿಗೆ ನಡೆದ ಹುಟ್ಟೂರ ಅಭಿನಂದನ ಕಾರ್ಯಕ್ರಮವು ಹಾಗೂ ಕಲ್ಲಡ್ಕದ ವಿವಿಧ ಸಂಘಟನೆಗಳ ವತಿಯಿಂದ ಕಲ್ಲಡ್ಕ ಪೇಟೆ ಇಂದ ಅಮ್ಟೂರು ವರೆಗೆ ಅ ಮೆರವಣಿಗೆ ತೆರೆದ ವಾಹನದ ಮೂಲಕ ಸ್ವಾಗತಿಸಲಾಯಿತು.
ಯುವಪ್ರತಿಭೆಗಳ ಭವಿಷ್ಯ ಉಜ್ವಲವಾಗಲಿ ಎಂಬ ಶುಭ ಹಾರೈಕೆಯೊಂದಿಗೆ…. ಕಲ್ಲಡ್ಕದಲ್ಲಿ ಇಂತಹ ಪ್ರತಿಭೆಗಳು ಮತ್ತಷ್ಟು ಹುಟ್ಟಿಬರಲಿ ಸುಲೋಚನಾ ಜಿ ಕೆ ಭಟ್ ಹೇಳಿದರು ಈ ಸಂದರ್ಭದಲ್ಲಿ ಮಾತನಾಡಿದ ದಿನೇಶ್ ಅಮ್ಟೂರು ಗ್ರಾಮೀಣ ಪ್ರದೇಶದ ಈ ಯುವಕರು ಶಾಂತಿಗಾಗಿ ಕ್ರೀಡೆ ಸೌಹಾರ್ದಕ್ಕಾಗಿ ಕ್ರೀಡೆ ಸಹಬಾಳ್ವೆ ಗಾಗಿ ಕ್ರೀಡೆ ಮೂಲಕ ಸ್ವಂತ ಪರಿಶ್ರಮದಿಂದ ದೈವ ದೇವರ ದಯೆ ಹಾಗೂ ತಂದೆ-ತಾಯಿಯ ಆಶೀರ್ವಾದ ಗುರುಹಿರಿಯರ ನಿತ್ಯ ಪ್ರೋತ್ಸಾಹದಿಂದ ನೇಪಾಳದಲ್ಲಿ ನಡೆದಂತಹ ಜುಡೋ ಕ್ರೀಡೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕವನ್ನು ಗಳಿಸುವ ಮೂಲಕ ಕಲ್ಲಡ್ಕದ ಕೀರ್ತಿಯನ್ನು ದೇಶದಲ್ಲಿ ಬೆಳಗಿಸುವಂತ ಸಾಧನೆಯನ್ನು ಮಾಡಿದ್ದಾರೆ ಎಂದು ಅಮ್ಟೂರು ಶುಭ ಹಾರೈಸಿದರು.
ಈ ಶುಭ ಸಂದರ್ಭದಲ್ಲಿ ಪಂಚವಟಿ ಸಂಕೀರ್ಣದ ಮಾಲೀಕರಾದ ಯತಿನ್ ಕುಮಾರ್ ಎಳ್ತಿಮರ್ ಕಟ್ಟೆಮಾರ್ ಮಂತ್ರದೇವತಾ ದೈವಸ್ಥಾನದ ಮುಖ್ಯಸ್ಥರಾದ ಮನೋಜ್ ಕಟ್ಟೆಮಾರ್ ಶುಭ ಹಾರೈಸಿದರು ಬಾಳ್ತಿಲ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹಿರಣ್ಮಯಿ ಬೈದರಡ್ಕ ಪ್ರಭಾಕರ ಶೆಟ್ಟಿ ಜಿನ್ನಪ್ಪ ಶ್ರೀಮನ್ ವಜ್ರನಾಥ್ ಮಾಡ್ಲಮಜಲ್ ಸುಂದರ ಪೂಜಾರಿ ನರಹರಿ ನಗರ ನಿಶ್ಚಿತ್ ಪೂಜಾರಿ ಇವರ ತಂದೆ ಸೀತಾರಾಮ ಪೂಜಾರಿ ತಾಯಿ ಸುಶೀಲ ಧನಂಜಯ ತಂದೆ ಚಂದ್ರಹಾಸ ದಾಸ್ ತಾಯಿ ಜಲಜಾಕ್ಷಿ ಹಾಗೂ ಗ್ರಾಮ ಪಂಚಾಯತ್ ಸದಸ್ಯರಾದ ಗೋಪಾಲಕೃಷ್ಣ ಪೂವಳ ಪವಿತ್ರ ಗೋಪಾಲ್ ಬಜಾರ್ ಹಿರಿಯರಾದ ಡೊಂಬಯ್ಯ ಟೈಲರ್ ಚಿದಾನಂದ ಆಚಾರ್ಯ ವಸಂತ ಬಟ್ಟೆ ಹಿತ್ತಲು ನವೀನ್ ಕೊಟ್ಟಾರಿ ಚಿದಾನಂದ ರಾಯಪ್ಪ ಕೊಡಿ ಬಾಲಕೃಷ್ಣ ಕೊಟ್ಟಾರಿ ಶ್ರೀಧರ್ ಸುವರ್ಣ ಹಾಗೂ ಶಾರದೋತ್ಸವ ಸಮಿತಿ ಅಧ್ಯಕ್ಷರು ಸರ್ವ ಸದಸ್ಯರು ತ್ರಿಶೂಲ್ ಫ್ರೆಂಡ್ಸ್ ಇದರ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಗೋಪಾಲ್ ಬಲ್ಯಾಯ ಇವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು