ಬಂಟ್ವಾಳ: ಮರ್ಹೂಂ ಸುರಿಬೈಲ್ ಉಸ್ತಾದ್ ಸ್ಥಾಪಿತ ದಾರುಲ್ ಅಶ್- ಅರಿಯ್ಯಾ ಎಜ್ಯುಕೇಶನ್ ಸೆಂಟರ್ ಸುರಿಬೈಲ್ ವಿದ್ಯಾಸಂಸ್ಥೆಗೆ ನೂತನ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ರಾಜ್ಯ ಉಪಾಧ್ಯಕ್ಷ ಡಾ.ಅಬ್ದುಲ್ ಶಕೀಲ್ ಭೇಟಿ ನೀಡಿದರು.
ಸಂಸ್ಥೆಯ ಮ್ಯಾನೇಜರ್ ಸಿ.ಎಚ್ ಮುಹಮ್ಮದಾಲಿ ಸಖಾಫಿ ಸ್ವಾಗತಿಸಿದರು. ಸಂಸ್ಥೆಯ ಸ್ಥಾಪಕ ಮರ್ಹೂಂ ಸುರಿಬೈಲ್ ಉಸ್ತಾದ್ ರವರ ಮಕ್ಬರ ಝೀಯರತ್ ಗೈದರು. ದಾರುಲ್ ಅಶ್-ಅರಿಯ್ಯಾ ಸಂಸ್ಥೆ ವತಿಯಿಂದ ಕೆಪಿಸಿಸಿ ಅಲ್ಪಸಂಖ್ಯಾತ ಘಟಕದ ನೂತನ ರಾಜ್ಯ ಉಪಾಧ್ಯಕ್ಷರಾಗಿ ಆಯ್ಕೆಯಾದ ಡಾ.ಅಬ್ದುಲ್ ಶಕೀಲ್ ರವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಡಾ. ಅಬ್ದುಲ್ ಶಕೀಲ್ ಮಾತನಾಡಿ ಧರ್ಮಗುರುಗಳು ಲೌಕಿಕ ಹಾಗೂ ಧಾರ್ಮಿಕ ವಿದ್ಯಾಭ್ಯಾಸಕ್ಕೆ ಸಮಾನ ಮಹತ್ವವನ್ನು ನೀಡುದರಿಂದ ಇಂದು ಬಡ ವಿದ್ಯಾರ್ಥಿಗಳು ಎಲ್ಲಾ ರಂಗದಲು ಮಿಂಚಲು ಸಾಧ್ಯವಾಗಿದೆ. ಓರ್ವ ಮುಸ್ಲಮಾನನಿಗೆ ಎರಡು ರೀತಿಯ ವಿದ್ಯೆ ಅತ್ಯಗತ್ಯ ಎಂದು ಹೇಳಿದರು.
ಈ ಸಂದರ್ಭ ಸಂಸ್ಥೆಯ ಉಪಾಧ್ಯಕ್ಷರಾದ ಬೊಳ್ಮಾಲ್ ಉಸ್ತಾದ್ , ಅಬ್ದುಲ್ಲಾ ಮುಸ್ಲಿಯಾರ್ ದುಬೈ ಉಪಸ್ಥಿತರಿದರು.