ಬಂಟ್ವಾಳ: ಮಾ.2 ರಂದು ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯ ವೇದವ್ಯಾಸಧ್ಯಾನಮಂದಿರದಲ್ಲಿ 2019-20 ನೇ ಸಾಲಿನ ವಿದ್ಯಾರ್ಥಿಗಳ ದೀಪ ಪ್ರದಾನಕಾರ್ಯಕ್ರಮ ನಡೆಸಲಾಯಿತು.
ಭಾರತ ಸನಾತನದೇಶ, ಈಗ ನಾಯಕನಾಗಿ ಭಾರತ ಎದ್ದು ನಿಂತಿದೆ, ಈ ಶಾಲೆಯಲ್ಲಿ ಕೇವಲ ವಿಷಯಗಳ ಶಿಕ್ಷಣ ನೀಡುತ್ತಿಲ್ಲ, ಜೊತೆಗೆ ತನ್ನ ಜೀವನ ಹೇಗಿರಬೇಕು ಎಂಬ ಬದುಕಿನ ಶಿಕ್ಷಣ ನೀಡುತ್ತಿದೆ. ಜೀವನದ ಮೌಲ್ಯಗಳನ್ನು ಅರಿತುಕೊಳ್ಳುವ ಶಿಕ್ಷಣ ಇಂದಿನ ಪೀಳಿಗೆಗೆ ದೊರಕಬೇಕು ಎಂಬ ನಿಟ್ಟಿನಲ್ಲಿ ಶ್ರೀರಾಮ ವಿದ್ಯಾಸಂಸ್ಥೆ ಕಾರ್‍ಯನಿರ್ವಹಿಸುತ್ತಿದೆ. ತಾನುಕಲಿತ ಮೌಲ್ಯವನ್ನು, ಸಂಸ್ಕಾರವನ್ನು ಪೌಢ ಶಿಕ್ಷಣಕ್ಕೆ ತೆರಳುತ್ತಿರುವ 7ನೇ ತರಗತಿಯ ವಿದ್ಯಾರ್ಥಿಗಳು ದೀಪವನ್ನು ಕಿರಿಯ ವಿದ್ಯಾರ್ಥಿಗಳಿಗೆ ಪ್ರಧಾನ ಮಾಡುವುದು ಈ ಕಾರ್ಯಕ್ರಮದ ಮೂಲ ಚಿಂತನೆ ಎಂದುಕಾರ್ಯಕ್ರಮದಅಧ್ಯಕ್ಷತೆವಹಿಸಿದ ವಿವೇಕಾನಂದ ವಿದ್ಯಾವರ್ದಕ ಸಂಘ ಪುತ್ತೂರು ಇದರ ಅದ್ಯಕ್ಷರಾದ ಡಾ|| ಪ್ರಭಾಕರ್ ಭಟ್‌ಕಲ್ಲಡ್ಕತಿಳಿಸಿದರು.
ಕಾರ್ಯಕ್ರಮದಲ್ಲಿ ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಿಗೆ ಹೂಗುಚ್ಛ ನೀಡಿ ಸ್ವಾಗತಿಸಲಾಯಿತು. ೭ನೇ ತರಗತಿಯ ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ, ಹಿರಿಯರಿಂದ ಆರ್ಶೀವಾದ ಪಡೆದುಕೊಂಡರು. ಕಿರಿಯ ವಿದ್ಯಾರ್ಥಿಗಳು ಪೌಢ ಶಾಲೆಗೆ ಹೊರಟು ನಿಂತಿರುವ ವಿದ್ಯಾರ್ಥಿಗಳಿಗೆ ಪುಷ್ಪ ನೀಡಿ ಆಶೀರ್ವಾದ ಪಡೆದುಕೊಂಡರು. ನಂತರ ೭ನೇ ತರಗತಿಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆ ಹಂಚಿಕೊಂಡರು. ೬ನೇ ತರಗತಿಯ ಆದಿಶ್ರೀ ರೈ ಪ್ರೇರಣಾಗೀತೆ ಹಾಡಿದಳು.ಕಾರ್ಯಕ್ರಮದಲ್ಲಿ ಇಫ್ಕೋ ಮತ್ತು ಸದಾಸ್ಮಿತ ಪೌಂಡೇಶನ್ ವತಿಯಿಂದ ಪದವಿ ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್‌ಟ್ಯಾಪ್ ವಿತರಣೆ ನಡೆಯಿತು.
ವೇದಿಕೆಯಲ್ಲಿ ಇಂಡಿಯನ್ ಫಾರ್ಮರ್ಸ್ ಫರ್ಟಿಲೈಸರ್ ಕೋ ಆಪರೇಟಿವ್ ಲಿಮಿಟೆಡ್ ಇದರ ಮುಖ್ಯ ವ್ಯವಸ್ಥಾಪಕರಾದ ರಜನೀಶ್‌ಪಾಂಡೆ, ಸದಾಸ್ಮಿತ ಫೌಂಡೇಶನ್ ಸಂಸ್ಥೆಯ ಅಧ್ಯಕ್ಷರಾದ ಡಿ.ವಿ ಶಿವರಾಮಗೌಡ, ಇಫ್ಕೋದ ರಾಜ್ಯ ಮಾರ್ಕೆಟಿಂಗ್ ಮ್ಯಾನೇಜರ್‌ರಾಗಿರುವ ಡಾ|ನಾರಾಯಣ ಸ್ವಾಮಿ, ಸದಾಸ್ಮಿತ ಫೌಂಡೇಶನ್ ಸಂಸ್ಥೆಯ ಕಾರ್ಯಾಧ್ಯಕ್ಷರಾಗಿರುವ ಕಾರ್ತಿಕ್‌ಗೌಡ, ಸದಾಸ್ಮಿತ ಫೌಂಡೇಶನ್‌ನ ಸಂಘಟನಾ ಕಾರ್ಯದರ್ಶಿಯಾಗಿರುವ ಚೇತನ್, ರಾಷ್ಟ್ರ ಸೇವಿಕಾ ಸಮಿತಿಯ ಕರ್ನಾಟಕ ದಕ್ಷಿಣ ಪ್ರಾಂತಕಾರ್ಯಕಾರಿಣಿ ಸದಸ್ಯರಾಗಿರುವ ಕಮಲಾ ಪ್ರಭಾಕರ್‌ಭಟ್, ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ, ಮಾಜಿಜಿಲ್ಲಾ ಪಂಚಾಯತ್ ಸದಸ್ಯ ಹಾಗೂ ವಿದ್ಯಾಕೇಂದ್ರದ ಆಡಳಿತ ಮಂಡಳಿಯ ಸದಸ್ಯರಾದ ಚೆನ್ನಪ್ಪಆರ್‌ಕೋಟ್ಯಾನ್, ಮಲ್ಲಿಕಾ ಶೆಟ್ಟಿ ಹಾಗೂ ಮುಖೋಪಾಧ್ಯಾಯರಾದ ರವಿರಾಜ್‌ಕಣಂತೂರು ಉಪಸ್ಥಿತರಿದ್ದರು.