ಬಂಟ್ವಾಳ: ಶ್ರೀ ನಾಗಬ್ರಹ್ಮ,ಶ್ರೀ ಅಣ್ಣಪ್ಪ ಪಂಜುರ್ಲಿ,ಶ್ರೀ ಕೊಡಮಣಿತ್ತಾಯ,ವ್ಯಾಘ್ರಚಾಮುಂಡಿ,ರಕ್ತೇಶ್ವರಿ,ಮೈಸಂದಾಯ,ಸಪರಿವಾರ ದೈವಗಳ ಗ್ರಾಮ ದೈವಸ್ಥಾನ ಕುಜ್ಲುಬೆಟ್ಟು,ಮೂಡನಡುಗೋಡು ಗ್ರಾಮ,ಬಂಟ್ವಾಳ ತಾಲೂಕು ಇದರ ವಾರ್ಷಿಕ ನೇಮೋತ್ಸವವು ಮಾರ್ಚ್ 6ರಂದು ಶನಿವಾರ ನಡೆಯಲಿದೆ.
ಅಂದು ಬೆಳಿಗ್ಗೆ ಧರ್ಮದೈವಗಳ ಭಂಡಾರ ಏರಿ ಮದ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದ್ದು ಬಳಿಕ ಮದ್ಯಾಹ್ನ 2 ಗಂಟೆಗೆ ಮೇನಾಡು ದೈವಸ್ಥಾನದಲ್ಲಿ ಮೈಸಂದಾಯ ರಕ್ತೇಶ್ವರಿ ದೈವಗಳ ನೇಮೋತ್ಸವ ನಡೆಯಲಿದ್ದು ಬಳಿಕ ರಾತ್ರಿ 8-00 ಗಂಟೆಗೆ ಕುಜ್ಲುಬೆಟ್ಟು ಗ್ರಾಮದೈವಸ್ಥಾನದಲ್ಲಿ ಶ್ರೀ ಕೊಡಮಣಿತ್ತಾಯ,ವ್ಯಾಘ್ರಚಾಮುಂಡಿ, ಶ್ರೀ ಅಣ್ಣಪ್ಪ ಪಂಜುರ್ಲಿ, ಕಲ್ಲುರ್ಟಿ,ಕಲ್ಕುಡ ದೈವಗಳಿಗೆ ನೇಮೋತ್ಸವ ನಡೆಯಲಿದ್ದು ಭಕ್ತಾದಿಗಳು ಈ ಎಲ್ಲಾ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಧರ್ಮದೈವಗಳ ಗಂಧಪ್ರಸಾದ ಸ್ವೀಕರಿಸಿ ಕೃತಾರ್ಥರಾಗಬೇಕೆಂದು ಶ್ರೀ ಕ್ಷೇತ್ರದ ಪ್ರಕಟನೆ ತಿಳಿಸಿದೆ.