ಪುಂಜಾಲಕಟ್ಟೆ;ಮಾ.3: ಕರ್ನಾಟಕ ರಾಜ್ಯ ಸಹಕಾರಿ ತೋಟಗಾರಿಕಾ ಮಾರಾಟ ಮಹಾ ಮಂಡಲ ಇದರ ನಿರ್ದೇಶಕರ ಮಂಡಳಿಗೆ ಕೆ.ಲಕ್ಷ್ಮೀನಾರಾಯಣ ಉಡುಪ ಅವರು ಮುಂದಿನ 5 ವರ್ಷಗಳವರಗೆ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ. ಕರ್ನಾಟಕ ಸಹಕಾರ ಚುನಾವಣಾ ಪ್ರಾಧಿಕಾರ ನಿಯಮ 14ಝಡ್ ರಂತೆ ಈ ಸ್ಥಾನವನ್ನು ಘೋಷಿಸಲಾಗಿದೆ. ಉಡುಪ ಅವರು ಪಿಲಾತಬೆಟ್ಟು ವ್ಯ.ಸೇ.ಸ.ಸಂಘದ ಅಧ್ಯಕ್ಷರಾಗಿದ್ದು, ವಿವಿಧ ಧಾರ್ಮಿಕ, ಸಹಕಾರ, ಸಾಮಾಜಿಕ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ.