ಬಂಟ್ವಾಳ: ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಕೋಡಿ ಹಳ್ಳಿ ಬಣ) ಮತ್ತು ಅರುಣ್ ಡಿ’ಸೋಜಾ, ವಿಲ್ಮಾ ಪ್ರಿಯಾ ಅಲ್ಬ್ಕರ್ಕ್ ಇವರು ತಮ್ಮ ನಿವಾಸದಲ್ಲಿ ರೈತರಿಗೆ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮ ಅಧ್ಯಕ್ಷೆತೆಯನ್ನು ಬಾಂಬಿಲ ಚರ್ಚ್ ನ ಧರ್ಮಗುರುಗಳಾದ ವಂದನೀಯ ರೇl ನಾ ಪೀಟರ್ ಗೋನ್ಸಾಲಿಸ್ ವಹಿಸಿ ಇಂತಹ ಕಾರ್ಯಕ್ರಮ ಮತ್ತಷ್ಟು ಮೂಡಿಬರಲಿ ಎಂದು ಹಾರೈಸೋಣ, ಪಡೆದ ಮಾಹಿತಿಯಿಂದ ನಮ್ಮಲ್ಲಿ ಅನೇಕ ಹೊಸ ಕೃಷಿ ವಿಚಾರದ ಅರಿವು ಮೂಡಿಸಿದೆ. ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ಶ್ರೀ ಮನೋಹರ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಇಂತ ರೈತ ಸ್ನೇಹಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ರೈತರು ಆಸಕ್ತಿಯಿಂದ ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇಲ್ಲಿನ ವಿಜ್ಞಾನಿ ಡಾl ನವೀನ್ ಬಿ.ಟಿ ಭಾಗವಹಿಸಿ ಮಣ್ಣು ಪರೀಕ್ಷೆ ಮತ್ತು ಅದರ ಮಾದರಿ ಸಂಗ್ರಹಿಸುವ ಕುರಿತು ಮಾಹಿತಿ ನೀಡಿದರು. ಆರ್ಥಿಕ ಸಾಕ್ಷರತಾ ಕೇಂದ್ರ ಅಮೂಲ್ಯ, ಮಂಗಳೂರು ಇಲ್ಲಿನ ಸಮಾಲೋಚಕರಾದ ಲತೇಶ್.ಬಿ ಮತ್ತು ಕುl ವೈಶಾಲಿ ಭಾಗವಹಿಸಿ, ಆರ್ಥಿಕ ಸಾಕ್ಷರತೆ, ಉಳಿತಾಯ ಭಾರತ ಸರ್ಕಾರದ ಸಾಮಾಜಿಕ ಭದ್ರತೆ ಯೋಜನೆ ಮತ್ತು ಕೃಷಿ ಸಂಬಂಧಿ ಬ್ಯಾಂಕ್ ಸೇವಾ ಸೌಲಭ್ಯ , ನಗದು ರಹಿತ ವ್ಯವಹಾರದ ಕುರಿತು ಮಾಹಿತಿ ನೀಡಿದರು. ತೋಟಗಾರಿಕ ಇಲಾಖೆ ವತಿಯಿಂದ ಸೇಸಪ್ಪ ಸಹಾಯಕ ತೋಟಗಾರಿಕಾ ಅಧಿಕಾರಿ ಇಲಾಖೆಯ ಸೌಲಭ್ಯದ ಕುರಿತು ಮಾಹಿತಿ ನೀಡಿದರು , ಕಾರ್ಯಕ್ರಮದಲ್ಲಿ ಪಂಚಾಯತ್ ಅಧ್ಯಕ್ಷೆ ಮೋಹಿನಿ, ನಂದಕುಮಾರ್ ರೈ ಅಧ್ಯಕ್ಷರು, ಬಡಗಬೆಳ್ಳೂರು ವ್ಯವಸಾಯ ಸಹಕಾರಿ ಸಂಘ , ಅಂಬುಜೆ ಗ್ರಾಮ ಪಂಚಾಯತ್ ಸದಸ್ಯ ರೋನಾಲ್ಡ್ ಡಿ’ಸೋಜಾ , ಪ್ರಗತಿಪರ ಕೃಷಿಕ ನಿರಂಜನ್ ಶೆಟ್ಟಿ ಬಡಗಬೆಳ್ಳೂರು ಉಪಸ್ಥಿತರಿದ್ದರು.