ಬಂಟ್ವಾಳ:ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ. ರಿ ಮಡಂತ್ಯಾರು. ಶ್ರೀ ಕ್ರಷ್ಣ ಜನ್ಮಾಷ್ಟಮಿ ಸಮಿತಿ ಮಡಂತ್ಯಾರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್. ರಿ. ಮಡಂತ್ಯಾರು ವಲಯ ಇದರ ಜಂಟಿ ಆಶ್ರಯದಲ್ಲಿ ಭಾರತ ಸರ್ಕಾರದ ಆರೋಗ್ಯ ಇಲಾಖೆಯ ಉಚಿತ ಆಯುಷ್ಮಾನ್ ಕಾರ್ಡ ವಿತರಣಾ ಕಾರ್ಯಕ್ರಮ ಮಾ 3 ರಂದು ಮಡಂತ್ಯಾರು ಗಣಪತಿ ಮಂಟಪದಲ್ಲಿ ಜರಗಿತು ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೌರವಾಧ್ಯಕ್ಷ ಸಂಜೀವ ಶೆಟ್ಟಿ ಮುಗೆರೋಡಿ ದೀಪ ಬೆಳಗಿಸಿ ಉದ್ಘಾಟಿಸಿದರು.
ಮಡಂತ್ಯಾರು ಗ್ರಾಮ ಪಂ ಅಧ್ಯಕ್ಷೆ ಶಶಿಪ್ರಭಾ ಅಯುಷ್ಮಾನ್ ಕಾರ್ಡ್ ವಿತರಿಸಿದರು ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಹರೀಶ್ ಶೆಟ್ಟಿ ಪದೆಂಜಿಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಮಡಂತ್ಯಾರು ಗ್ರಾಪಂ ಅಭಿವೃದ್ಧಿ ಅಧಿಕಾರಿ ಪುರುಷೋತ್ತಮ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಡಂತ್ಯಾರು ವಲಯದ ಮೇಲ್ವಿಚಾರಕ ಆದಿತ್ಯ . ಶ್ರೀ ಕ್ರಷ್ಣ ಜನ್ಮಾಷ್ಟಮಿ ಸಮಿತಿ ಕೋಶಾಧಿಕಾರಿ ನಾರಾಯಣ ಪೂಜಾರಿ ಮಚ್ಚಿನ. ಶ್ರೀ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಉಮೇಶ್ ಸುವರ್ಣ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಡಂತ್ಯಾರು ಗ್ರಾ ಪಂ ಉಪಾಧ್ಯಕ್ಷೆ ಸಂಗೀತ ಶೆಟ್ಟಿ ಹಾಗೂ ಸದಸ್ಯರು ಗಣೇಶೋತ್ಸವ ಸಮಿತಿ ಪಧಾದಿಕಾರಿಗಳು. ಶ್ರೀ ಕ್ರಷ್ಣ ಜನ್ಮಾಷ್ಟಮಿ ಸಮಿತಿ ಪಧಾದಿಕಾರಿಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸೇವಾನಿರತೆಯರು ಕಾರ್ಯಕ್ರಮದ ಯಶಶ್ವಿಗೆ ಸಹಕರಿಸಿದರು ಕಾಂತಪ್ಪ ಗೌಡ ಪ್ರಸ್ತಾವಿಕವಾಗಿ ಮಾತನಾಡಿ ಅಯುಷ್ಮಾನ್ ಕಾರ್ಡ್ ಉಪಯೋಗಿಸುವ ಬಗ್ಗೆ ಮಾಹಿತಿ ನೀಡಿದರು ಅಮಿತಾ ಅಶೋಕ್ ಬಂಡಾರಿ ಪ್ರಾರ್ಥನೆ ಗೈದರು ನವೀನ್ ಕೋಡ್ಲಕ್ಕೆ ಸ್ವಾಗತಿಸಿ ಸತೀಶ್ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು