ಪುಂಜಾಲಕಟ್ಟೆ : ಸಾಮಾಜಿಕ ಸೇವೆಗೈಯ್ಯುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸೇವಾಕಾರ್ಯದ ಪ್ರಯುಕ್ತ ಕಾಲಿನ ನರ ದೌರ್ಬಲ್ಯದಿಂದ ಬಳಲುತ್ತಿರುವ ಮಂಗಳೂರು ತಾಲೂಕು ಬೈಕಂಪಾಡಿ ಮೀನಕಳಿಯ ಉಷಾ ಮತ್ತು ತುಕಾರಾಮ ಸಾಲ್ಯಾನ್ ದಂಪತಿಯ 12 ವರ್ಷದ ಪುತ್ರಿ ಜಾಗೃತಿಯ ಚಿಕಿತ್ಸೆಗೆ ಅಜ್ಜಿಬೆಟ್ಟು ,ಪದವು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ 28,532 ರೂ. ಧನ ಸಹಾಯದ ಚೆಕ್‌ಅನ್ನು ಪದವು ದೇವಸ್ಥಾನದಲ್ಲಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಕುಂಡೋಳಿಗುತ್ತು, ಜೀರ್ಣೋದ್ಧಾರ ಸಮಿತಿ ಪ್ರ. ಕಾರ್ಯದರ್ಶಿಯೋಗೀಶ್ ಕಳಸಡ್ಕ, ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.
—————————————————
ಸಾಮಾಜಿಕ ಸೇವೆಗೈಯ್ಯುತ್ತಿರುವ ತುಳುನಾಡ ಪೊರ್ಲು ಸೇವಾ ಟ್ರಸ್ಟ್ ನ ಸೇವಾಕಾರ್ಯದ ಪ್ರಯುಕ್ತ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಜಖಂಗೊಂಡು ಚಿಕಿತ್ಸೆ ಪಡೆಯುತ್ತಿರುವ, ಮೂಡುಬಿದಿರೆ ತಾಲೂಕಿನ ಪಡು ಮಾರ್ನಾಡು ನಡಿಲ್ಲ ನಡುಮನೆಯ ಬಾಲಕೃಷ್ಣ ಶೆಟ್ಟಿ ಮತ್ತು ಕುಸುಮಾವತಿ ದಂಪತಿಯ 12 ವರ್ಷದ ಪುತ್ರಿ ವೈಷ್ಣವಿಯ ಚಿಕಿತ್ಸೆಗೆ ಕಕ್ಯಪದವು ಶ್ರೀ ಕ್ಷೇತ್ರ ಗರೋಡಿ ಮತ್ತು ಶ್ರೀ ಕ್ಷೇತ್ರ ಪೊಳಲಿಯಲ್ಲಿ ವಿಭಿನ್ನ ವೇಷ ಧರಿಸಿ ಸಂಗ್ರಹಿಸಿದ 51,468 ರೂ. ಧನ ಸಹಾಯದ ಚೆಕ್‌ನ್ನು ಹಸ್ತಾಂತರಿಸಲಾಯಿತು. ಕಕ್ಯಪದವು ಗರೋಡಿ ಕ್ಷೇತ್ರದ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲ್ಯಾನ್ , ಉತ್ಸವ ಸಮಿತಿಯ ಅಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ, ಉಳಿ ಸೇವಾ ಸಹಕಾರ ಸಂಘದ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್, ಶ್ರೀ ಪಂಚದುರ್ಗಾ ಜನರಲ್ ಸ್ಟೋರ್‌ನ ಮಾಲಕ ಚಂದ್ರ ಕಕ್ಯಪದವು ಮತ್ತು ಉತ್ಸವ ಸಮಿತಿಯ ಉಪಾಧ್ಯಕ್ಷ ಪರಮೇಶ್ವರ ಗಿಳಿಂಗಾಜೆ ಹಾಗೂ ಟ್ರಸ್ಟ್ ನ ಸದಸ್ಯರು ಉಪಸ್ಥಿತರಿದ್ದರು.