ಕಷ್ಟ ಸುಖ ನೋವು ನಲಿವುಗಳನ್ನು ಸಹಿಸಿಕೊಂಡು ಬದುಕಿನುದ್ದಕ್ಕೂ ಬೇರೆಯವರ ಒಳಿತಿಗಾಗಿ ಬದುಕುವವಳು ಹೆಣ್ಣು. ಹುಟ್ಟಿನಿಂದ ತನ್ನವರ ಶ್ರೇಯಸ್ಸಿಗಾಗಿಯೇ ಮಿಡಿಯುವ ಹೃದಯವೊಂದಿದ್ದರೆ ಅದು ಅವಳ ವಿಶಾಲ ಹೃದಯ ಮಾತ್ರ. ಮಗಳಾಗಿ, ತಂಗಿಯಾಗು, ಅಕ್ಕ, ಅಮ್ಮ, ದೊಡಮ್ಮ, ಚಿಕಮ್ಮ, ಪತ್ನಿಯಾಗಿ, ದೇವತೆಯಾಗಿ ಮನೆ ಮನಸ್ಸನ್ನು ಬೆಳಗುವಳು.
ವಿರಾಮವಿಲ್ಲದ ಉದ್ಯೋಗ ಅವಳದು, ಆದರೂ ಸಂಬಳ ಬಯಸದೆ ಪ್ರೀತಿ ಬಯಸಿ ಸಮಯದ ಲೆಕ್ಕಾಚಾರವಿಲ್ಲದೆ ದುಡಿಯವಳು. ತಾನು ಹಸಿವನ್ನು ಸಹಿಸಿ ತನ್ನವರಿಗೆ ರುಚಿ ರುಚಿಯಾದದ್ದನ್ನು ಬಡಿಸುತ್ತಾ ಖುಷಿಪಡುವಳು *ಅವಳೆ ಮಹಿಳೆ* ಅಡುಗೆ ಕೆಲಸ ಮಾತ್ರವಲ್ಲ ಸಮಾಜವನ್ನು ಆಳುವ ಶಕ್ತಿ ನನಗಿದೆ ಎಂದು ತೋರಿಸಿಕೊಟ್ಟವಳು, ತನ್ನ ಸಮಾನತೆಗಾಗಿ ಈಗಲೂ ಹೋರಾಡುತಿರುವವಳು, ಪೈಲಟ್, ಡ್ರೈವರ್, ಮ್ಯಾನೇಜರ್, ಲೀಡರ್, ಹೀಗೆ ಎಲ್ಲಾ ಕ್ಷೇತ್ರದಲ್ಲಿ ತನಿದ್ದರೂ ತನ್ನ ಮಗುವಿಗೆ ತಾಯಿಯಾಗಿ ಮಮತೆಯ ಜೀವವಾಗಿ ಉಳಿಯುವವಳು. ಅಂತಹ ಮಹಿಳೆಗೆ ಪ್ರೀತಿಯ ಸಾಂತ್ವಾನವನ್ನು ನೀಡಿ ಸಂಭ್ರಮದ ಸವಿಯನ್ನು ಉಣಬಡಿಸಿದಾಗ ಸಂತಸದ ಕಡಲಲ್ಲಿ ತೇಲುವಳು.
ನೋವು, ಸಂಕಟ , ದುಃಖಗಳಿದ್ದರೂ ಎಲ್ಲರಿಗೋಸ್ಕರ ಖುಷಿಯಿಂದ ಇರುವ ಎಲ್ಲಾ ಹೆಮ್ಮೆಯ ಮಹಿಳೆಯರಿಗೆ ಒಂದು ಸಲಾಮ್…
ಬರಹ : ಸಮೀಕ್ಷಾ ಶಿರ್ಲಾಲು