ಬಂಟ್ವಾಳ: ಹಳೆ ವೈಯಕ್ತಿಕ ದ್ವೇಷ ಸಾಧಿಸುವುದ್ದಕ್ಕಾಗಿ ಜ್ಯೋತಿಷ್ಯ ಶಾಸ್ತ್ರ ಕೇಳುವ ನೆಪದಲ್ಲಿ ಬಂದು ಶಾಸ್ತ್ರ ಕೇಳುತ್ತಿದ್ದ ವೇಳೆಯಲ್ಲಿ ಯೇ ತಲೆ ಮಾರಕಾಸ್ತ್ರದಿಂದ ಕಡಿದು ಪರಾರಿಯಾಗಿದ್ದ ಆರೋಪಿಯ ನ್ನು ಬಂಟ್ವಾಳ ನಗರ ಪೋಲೀಸ್ ಇನ್ಸ್ ಪೆಕ್ಟರ್ ಚೆಲುವರಾಜ್ ನೇತ್ರತ್ವದ ತಂಡ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಪಂಜಿಕಲ್ಲು ನಿವಾಸಿ ಮೋಹನ್ ಪ್ರಭು ಬಂಧಿತ ಆರೋಪಿ.
ಬಿಸಿರೋಡಿನ ಪದ್ಮಾ ಕಾಂಪ್ಲೆಕ್ಸ್ ನಲ್ಲಿರುವ ಶ್ರೀ ದುರ್ಗಾಪರಮೇಶ್ವರಿ ಜ್ಯೋತಿಷಾಲಯದಲ್ಲಿ ಪಂಡಿತ್ ಲಕ್ಮೀಕಾಂತ್ ಭಟ್ ಹೆಸರಿನ ಲ್ಲಿ ಜ್ಯೋತಿಷ್ಯ ಹೇಳುತ್ತಿದ್ದ ಮೂಲತಃ ಬಾಗಲಕೋಟೆ ನಿವಾಸಿ ಹನುಮಂತಪ್ಪ ಅವರಿಗೆ ಆರೋಪಿ ಮೋಹನ್ ಪ್ರಭು ಅವರು ಹಳೆಯ ದ್ವೇಷವನ್ನು ಸಾಧಿಸಲು ಮಾರಕಾಸ್ತ್ರಗಳಿಂದ ತಲೆಗೆ ಕಡಿದು ಪರಾರಿಯಾಗಿದ್ದರು.
*ಘಟನೆಗೆ ಕಾರಣವೇನು ಗೊತ್ತೇ?*
ಮೋಹನ್ ಪ್ರಭು ಅವರ ಮೊದಲ ಪತಿ ವಿಚ್ಚೇದನ ನೀಡಿದ್ದಾರೆ , ಅದಕ್ಕೆ ಕಾರಣ ಜ್ಯೋತಿಷಿ ಹನುಮಂತ ಪ್ಪ ಕಾರಣ ಎಂಬ ದ್ವೇಷವನ್ನು ಒಂದು ವರ್ಷದ ಬಳಿಕ ಸಾಧಿಸಿದ್ದಾರೆ ಎಂಬುದು ಪೋಲೀಸ್ ತನಿಖೆಯ ವೇಳೆ ಬಹಿರಂಗ ಗೊಂಡಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಮೋಹನ್ ಪಭು ಅವರ ಮೊದಲಿನ ಹೆಂಡತಿ ಗೆ ಜ್ಯೋತಿಷ್ಯ ಶಾಸ್ತ್ರದ ಬಗ್ಗೆ ಅಪಾರವಾದ ನಂಬಿಕೆ ಇದ್ದು ಹನುಮಂತಪ್ಪ ಅವರ ಬಳಿಗೆ ಜ್ಯೋತಿಷ್ಯ ಕೇಳಲು ಬರುತ್ತಿದ್ದರು.
ಹನುಮಂತ ಪ್ಪ ಅವರು ಪ್ರಭು ಅವರ ಜೊತೆ ಸಂಸಾರ ಮಾಡಿದರೆ ಸರಿ ಹೋಗುವುದಿಲ್ಲ ಎಂದು ನಂಬಿಸಿದಲ್ಲದೆ ಈ ಗಂಡ ಸರಿ ಹೋಗುವುದಿಲ್ಲ ಎಂದು ಇಲ್ಲಸಲ್ಲದ ಜ್ಯೋತಿಷ್ಯ ಶಾಸ್ತ್ರದ ಮೂಲಕ ಪತಿ ಪತ್ನಿ ನಡುವೆ ವಿರಸ ಉಂಟಾಗಿ ಡಿವೋರ್ಸ್ ಆಗಿತ್ತು.
ಈ ವಿಚ್ಚೇದನ ಪಡೆಯಲು ಹನುಂತಪ್ಪನ ಜ್ಯೋತಿಷ್ಯ ವೇ ಕಾರಣ ಎಂಬುದು ಪ್ರಭು ಅವರಿಗೆ ಕೋಪವಾಗಿತ್ತು. ಈ ಹಗೆತನ್ನು ಸಾಧಿಸಲು ಕಳೆದ ಒಂದು ವರ್ಷದಿಂದ ಕಾಯುತ್ತಿದ್ದು ಮಾ.19 ರಂದು ದ್ವೇಷದ ಸಾಧಿಸುವ ಉದ್ದೇಶದಿಂದ ಜ್ಯೋತಿಷ್ಯ ಕೇಳುವ ನೆಪದಲ್ಲಿ ಜ್ಯೋತಿಷ್ಯಾಲಯಕ್ಕೆ ಬಂದು ಕಬ್ಬಿಣದ ರಾಡ್ ನಿಂದ ತಲೆಗೆ ಕಡಿದು ಪರಾರಿಯಾಗಿದ್ದಾರೆ.
ಹನುಮಂತಪ್ಪ ಅವರ ಕಚೇರಿಗೆ ಬರುವ ಮೊದಲು
ಬೇರೆ ಹೆಸರಿನಲ್ಲಿ ಮೂರು ದಿನಗಳ ಹಿಂದೆ ಕರೆ ಮಾಡಿ ಮೂಡಬಿದ್ರೆ ವಿಳಾಸ ಹೇಳಿ ಒಂದು ಬರುತ್ತೇನೆ ಎಂದು ತಿಳಿಸಿದ್ದ ಪ್ರಭು.
ಡಿ.ವೈ.ಎಸ್.ಪಿ ವೆಲೆಂಟೈನ್ ಡಿ.ಸೋಜ ಅವರ ಮಾರ್ಗದರ್ಶನ ದಲ್ಲಿ ಚೆಲುವರಾಜ್ ಅವರ ನೇತ್ರತ್ವದಲ್ಲಿ ಅಪರಾಧ ವಿಭಾಗದ ಪಿಎಸ್.ಐ.ಕಲೈಮಾರ್ ಪಿ. ಅವರ ತಂಡ ಆರೋಪಿಯ ನ್ನು ಪತ್ತೆ ಮಾಡಿದ್ದಾರೆ.
ಕಾರ್ಯ ಚರಣೆಯಲ್ಲಿ ಎಎಸ್.ಐ.ಜಯರಾಮ, ಸಿಬ್ಬಂದಿ ಗಳಾದ ಲೋಕೇಶ್, ವಿವೇಕ್ , ಕುಮಾರ್ , ಚಾಲಕ ವಿಜಯ್ , ಉಸ್ಮಾನ್ ಭಾಗವಹಿಸಿದ್ದರು.