ಬಂಟ್ವಾಳ: ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ನಿ. ಬಿಸಿರೋಡು ಮತ್ತು ತೋಟಗಾರಿಕಾ ಇಲಾಖೆ , ರೋಟರಿ ಕ್ಲಬ್ ಬಂಟ್ವಾಳ ಇವರ ವತಿಯಿಂದ ತೆಂಗು ಹಾಗೂ ಅಡಿಕೆ ಮರ ಏರುವ ಯಂತ್ರದ ಪ್ರಾತ್ಯಕ್ಷಿಕೆ , ತರಬೇತಿ ಸಮಗ್ರ ಮಾಹಿತಿ ಕಾರ್ಯಗಾರ ಮಾ.2 ರಂದು ಮಂಗಳವಾರ ಕೃಷಿಕ ಉದ್ಯಮಿ ಸೇಸಪ್ಪ ಕೋಟ್ಯಾನ್ ಅವರ ತೆಂಗಿನ ತೋಟದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಕೃಷಿಕ ಸೇಸಪ್ಪ ಕೋಟ್ಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿ ಬಂಟ್ವಾಳ ರೋಟರಿ ಅಧ್ಯಕ್ಷ ನಾರಾಯಣ ಹೆಗ್ಡೆ ಮಾತನಾಡಿ ರೈತರ ಜೊತೆಗೆ ಶಿಕ್ಷಣ ಕ್ಕೆ ಹೆಚ್ಚಿ ಒತ್ತು ನೀಡುವ ಮೂಲಕ ಸಮಾಜದ ಒಂದು ಭಾಗವಾಗಿ ರೋಟರಿ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ತೆಂಗು ಉತ್ಪಾದಕರ ಸೌಹಾರ್ದ ಸಹಕಾರಿ ನಿ.ಇದರ ಅಧ್ಯಕ್ಷ ರಾಜಾ ಬಂಟ್ವಾಳ ಮಾತನಾಡಿ ಕೃಷಿ ಚಟುವಟಿಕೆಗೆ ಹೊಸ ತಂತ್ರಜ್ಞಾನದ ಬಳಕೆ ಮಾಡುವ ಮತ್ತು ಹೊಸ ಹೊಸ ಯಂತ್ರ ಗಳ ಪರಿಚಯಿಸುವ ಉದ್ದೇಶದಿಂದ ಕಾರ್ಯ ಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ತೋಟಗಾರಿಕಾ ಹಿರಿಯ ಸಹಾಯಕ ನಿರ್ದೇಶಕ ಪ್ರದೀಪ್ ಕುಮಾರ್ ಡಿ.ಸೋಜ ಮಾತನಾಡಿ ಕೃಷಿಕರು ಬೆಳೆದ ಬೆಳೆಗಳಿಗೆ ಹೆಚ್ಚು ಲಾಭದಾಯಕದ ಉದ್ದೇಶದಿಂದ ರೈತರ ಕಂಪೆನಿ ಮಾಡಲು ಅವಕಾಶವಿರುವುದರಿಂದ ಮುಂದಿನ ದಿನಗಳಲ್ಲಿ ಎಲ್ಲಾ ರೈತರನ್ನು ಸೇರಿಸಿ ಕಂಪೆನಿ ಮಾಡುವ ಅಲೋಚನೆ ಮಾಡಲಾಗುತ್ತಿದೆ , ಮುಂದಿನ ವರ್ಷ ಕಾರ್ಯರೂಪಕ್ಕೆ ಬರುವ ರೀತಿಯಲ್ಲಿ ಕಾರ್ಯಯೋಜನೆ ಮಾಡಲಾಗುತ್ತಿದೆ ಎಂದು ಅವರು ಹೇಳಿದರು.
ತೆಂಗು ಬೆಲೆಗೆ ಹೆಚ್ಚು ಮಾರುಕಟ್ಟೆಯಿರುವುದರಿಂದ ತೆಂಗು ಪ್ರದೇಶದ ವಿಸ್ತರಣೆ ಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ತೆಂಗು ಕೃಷಿಗೆ ಇಲಾಖೆಯಿಂದ ಸಹಾಯಧನ ಸಿಗುತ್ತದೆ ಮತ್ತು ಉದ್ಯೋಗ ಖಾತರಿ ಮೂಲಕ ತೆಂಗು ಕೃಷಿಗೆ ಅವಕಾಶವಿದ್ದು ಬಳಸಿಕೊಳ್ಳುವಂತೆ ಅವರು ತಿಳಿಸಿದರು.
ಮರ ಏರುವ ಮೆಷಿನ್ ನ ತಯಾರಕರಾದ ಕೃಷಿಕ ಕೋಮಾಲಿ ಗಣಪತಿ ಭಟ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.
ವೇದಿಕೆಯಲ್ಲಿ ರೋಟರಿ ಮಾಜಿ ಅಧ್ಯಕ್ಷ ಸಂಜೀವ ಪೂಜಾರಿ ಉಪಸ್ಥಿತರಿದ್ದರು.
ನಿವೃತ್ತ ಶಿಕ್ಷಕ ಸೇಸಪ್ಪ ಅವರು ಸ್ವಾಗತಿಸಿ ವಂದಿಸಿದರು.