ಬಂಟ್ವಾಳ: ತಾಲೂಕಿನ ಸಾರ್ವಜನಿಕರಿಗೆ ಸರಕಾರಿ ಇಲಾಖೆಯಲ್ಲಿನ ಕರ್ತವ್ಯ ಲೋಪಕ್ಕೆ ಹಾಗೂ ಭ್ರಷ್ಟಚಾರಕ್ಕೆ ಸಂಬಂಧಿಸಿ ದೂರುಗಳನ್ನು ನೀಡುವುದಕ್ಕೆ ಅನುಕೂಲವಾಗು ವ ಉದ್ದೇಶದಿಂದ ಸಾರ್ವಜನಿಕ ರ ಬೇಡಿಕೆಯಂತೆ ಆಟೋಗಳಲ್ಲಿ ಎಸಿಬಿ ಅಧಿಕಾರಿಗಳ ದೂರವಾಣಿ ಸಂಖ್ಯೆಗಳನ್ನು ಅಳವಡಿಸುವುದಕ್ಕೆ ಚಿಂತನೆ ನಡೆಸಲಾಗಿದೆ ಎಂದು ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ)ದ ಇನ್ಸ್ಪೆಕ್ಟರ್ ಶ್ಯಾಮಸುಂದರ್ ಅವರು ಹೇಳಿದರು.
ಈ ಕುರಿತು ರಿಕ್ಷಾ ಚಾಲಕರು ಸಹಕಾರ ನೀಡುವಂತೆ ತಿಳಿಸಿದರು.
ಅವರು ಬೆಳ್ತಂಗಡಿಯಲ್ಲಿ ಸಾರ್ವಜನಿಕರಿಂದ ದೂರು ಹಾಗೂ ಅಹವಾಲುಗಳನ್ನು ಸ್ವೀಕರಿಸಿದರು ಬಳಿಕ ರಿಕ್ಷಾ ಚಾಲಕರೊಂದಿಗೆ ಮಾತುಕತೆ ನಡೆಸಿ ಈ ವಿಚಾರ ತಿಳಿಸಿದರು.
ಬಳಿಕ ಸಾರ್ವಜನಿಕರಿಗೆ ಎಸಿಬಿ ಕಾರ್ಯಚಟುವಟಿಕೆಗಳ ಕುರಿತು ಮಾಹಿತಿ ನೀಡಲಾಯಿತು.
ಮಧ್ಯಾಹ್ನದ ಬಳಿಕ ಬಂಟ್ವಾಳದಲ್ಲಿ ಅಧಿಕಾರಿಗಳು ಸಾರ್ವಜನಿಕರಿಂದ ದೂರು, ಅಹವಾಲನ್ನು ಸ್ವೀಕರಿಸಿದರು. ಎಸಿಬಿಯ ಹೆಡ್ ಕಾನ್ಸ್ಟೇಬಲ್ ಹರಿಪ್ರಸಾದ್, ಚಾಲಕ ರಾಜೇಶ್ ಉಪಸ್ಥಿತರಿದ್ದರು.