ಬಂಟ್ವಾಳ: ಆರಾಧನಾ ಫ್ರೆಂಡ್ಸ್ ಸರ್ಕಲ್ ಬಿ.ಸಿ.ರೋಡ್, ಬೈಪಾಸ್ ಇದರ ಆಶ್ರಯದಲ್ಲಿ ಯಕ್ಷಗಾನ ಬಯಲಾಟ,ಸನ್ಮಾನ ಸಮಾರಂಭ ,ಪ್ಋಇಭಾ ಪುರಸ್ಕಾರ ಕಾರ್ಯಕ್ರಮವು ಮಾ.28 ರಂದು ಸಂಜೆ 6 ಗಂಟೆಗೆ ಬಿ.ಸಿ.ರೋಡಿನ ಉದ್ಯಾನವನದ ಪಕ್ಕದ ಖಾಸಗಿ ಸಭಾಭವನದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.33 ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆಯುವ ಈ ಕಾರ್ಯಕ್ರಮದಲ್ಲಿ ಯಕ್ಷರಂಗದ ಹಿರಿಯ ಹಾಸ್ಯ ಕಲಾವಿದ ಬಂಟ್ವಾಳ ಜಯರಾಮ ಆಚಾರ್ಯ ಅವರಿಗೆ ಆರಾಧನಾ ಪ್ರಶಸ್ತಿ ಪ್ರಧಾನ ಮಾಡಲಾಗುವುದಲ್ಲದೆ,ಕಳೆದ 2019-20 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾಲಿನ ಸಹಾಯದಿಂದ ಪರೀಕ್ಷೆ ಬರೆದು 424 ಅಂಕಗಳಿಸಿದ ಕೌಶಿಕ್ ಮತ್ತು ಪಿಯುಸಿಯಲ್ಲಿ ಎಸ್ ವಿಎಸ್ ಪಿ.ಯು.ಕಾಲೇಜಿನ ವಾಣಿಜ್ಯ ವಿಭಾಗದಲ್ಲಿ 97.5 ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ಚೈತ್ರಾಂಜಲಿ ಮಯ್ಯರಬೈಲು ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು.ಇದೇ ವೇಳೆ ಹನುಮಗಿರಿ ಮೇಳದಿಂದ ಯಕ್ಷಗಾನ ಬಯಲಾಟವು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.