Saturday, April 6, 2024

ಆಧ್ಯಾತ್ಮದಲ್ಲಿ ಶಾಂತಿ ಆನಂದ ಪ್ರಾಪ್ತಿಯಾಗುತ್ತದೆ: ಒಡಿಯೂರು ಶ್ರೀ

ವಿಟ್ಲ:  ಬದುಕು ನಿರಂತರ  ಹರಿಯುವ ನೀರಿನಂತೆ ಚಲನಶೀಲವಾಗಿರುವುದು. ಧರ್ಮದ ಪಥದಲ್ಲಿ ನಾವೆಲ್ಲ ಸಾಗಿದಾಗ  ನಮ್ಮ ಬದುಕು ಹಸನಾಗುತ್ತದೆ. ಸಮಾಜ ಸೇವೆ ಸಂತನ ಕರ್ತವ್ಯ, ಮನಸ್ಸು ಎಂಬ ಅಲೆ ಅಂತರಂಗದಲ್ಲಿ ಕ್ರೀಯಾಶೀಲವಾಗಿರುತ್ತದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು.

ಅವರು ಒಡಿಯೂರು ಶ್ರೀ ಗುರುದೇವದತ್ತ‌ ಸಂಸ್ಥಾನದಲ್ಲಿ   ಫೆ.22ರಂದು  ಶ್ರೀ ಒಡಿಯೂರು‌ ರಥೋತ್ಸವದ ಪ್ರಯುಕ್ತ ನಡೆದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ದ ಧರ್ಮ ಸಭೆಯನ್ನು ದೀಪಬೆಳಗಿಸಿ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಆಧ್ಯಾತ್ಮ ಮತ್ತು ವಿಜ್ಞಾನ ಜೊತೆ ಜೊತೆಯಾಗಿ ಸಾಗಬೇಕು. ದೇಹ ವೆಂಬ ರಥಕ್ಕೆ ಧರ್ಮ ಎಂಭ ಪಥ ಅಗತ್ಯ. ಸಾಧನೆಯ ಗುಟ್ಟು ಭಗವಂತನಲ್ಲಿದೆ. ಅಂತರಂಗದಲ್ಲಿ ನಿಜವಾದ ಶಾಂತಿಯನ್ನು ಹುಡುಕಬೇಕು. ಆಧ್ಯಾತ್ಮದಲ್ಲಿ ಶಾಂತಿ ಆನಂದ ಪ್ರಾಪ್ತಿ ಯಾಗುತ್ತದೆ. ಧರ್ಮದ ರಹದಾರಿಯಲ್ಲಿ ದೇಹ ರಥ ಸಾಗಿದಾಗ ನಿಜವಾದ ಗಮ್ಯ ಸ್ಥಳವನ್ನು ತಲುಪಬಹುದು. ದೀನ ದಲಿತರ ಸೇವೆಯೇ ಭಗವಂತನಿಗೆ ಸಲ್ಲುವ ನಿಜವಾದ ಸೇವೆ. ನಮ್ಮ ಅಂತರಂಗದಲ್ಲಿ  ಸರ್ಜಿಕಲ್ ಸ್ಟ್ರೈಕ್ ಆಗಬೇಕಾಗಿದೆ. ಎಚ್ಚರಿಕೆಯಿಂದ ನಮ್ಮ ಬದುಕನ್ನು ಸಾಗಿಸುವ ಎಂದು ಎಲ್ಲರಿಗೂ ಶುಭಹಾರೈಸಿದರು.

ದಿವ್ಯ ಉಪಸ್ಥಿತರಿದ್ದ ಸಾಧ್ವಿ ಶ್ರೀ ಮಾತಾನಂದಮಯೀ ರವರು ಆಶೀರ್ವಚನ ನೀಡಿ ಉತ್ತಮ ಕಾರ್ಯಗಳಿಂದ ಜೀವನ ಸಾರ್ಥಕತೆ, ಆತ್ಮಸಾಕ್ಷಾತ್ಕಾರ ಪ್ರಾಪ್ತಿಯಾಗುತ್ತದೆ. ದೇವರಲ್ಲಿ ಸಮರ್ಪಣಾ ಭಾವದ ಭಕ್ತಿ ಇಟ್ಟಾಗ ಅನುಗ್ರಹ ಸಾಧ್ಯ. ಸಂತನ ಬದುಕು ಅದು‌ಸಮಾಜಕ್ಕಾಗಿ.

ಮರೋಳಿ ಶ್ರೀ ಸೂರ್ಯನಾರಾಯಣ‌ ದೇವಾಲಯದ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಕೆ.ಪಿ. ಶೆಟ್ಟಿ ಮೊಡಂಕಾಪುಗುತ್ತು,

ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಕಾರ್ಯಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ತುಳು ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷರಾದ ಎ.ಸಿ.ಭಂಡಾರಿ,  ಒಡಿಯೂರು ಶ್ರೀ ವಿವಿದೋದ್ದೇಶ ಸೌಹಾರ್ಧ ಸಹಕಾರಿಯ ಅಧ್ಯಕ್ಷರಾದ ಎ. ಸುರೇಶ್ ರೈ, ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ   ಸಮಿತಿ ಮಂಗಳೂರು ವಲಯ ಕಾರ್ಯಧ್ಯಕ್ಷ ಜಿತೇಂದ್ರ ಕೊಟ್ಟಾರಿ, ಉದ್ಯಮಿ ಭಗವಾನ್ ಆಳ್ವ,  ವಾಮಯ್ಯ ಶೆಟ್ಟಿ ಮುಂಬೈ, ಅಜಿತ್ ಕುಮಾರ್ ಪಂದಳಂ, ಕೃಷ್ಣ ಶೆಟ್ಟಿ ಮುಂಬೈ, ಈ ಸಂದರ್ಭದಲ್ಲಿ ದತ್ತಪ್ರಕಾಶ ವಿಂಶತಿ ವಿಷೇಶಾಂಕವನ್ನು‌ ಸ್ವಾಮೀಜಿಯವರು ಬಿಡುಗಡೆ ಮಾಡಿದರು.

ಕದ್ರಿ ನವನೀತ ಶೆಟ್ಟಿಯವರು ಸ್ವಾಮೀಜಿಯವರ ಷಷ್ಠ್ಯಬ್ದ ಕಾರ್ಯಕ್ರಮದ ಕುರಿತಾಗಿ ಮಾಹಿತಿ ನೀಡದರು.

ವಾಮಯ್ಯ ಶೆಟ್ಟಿ ದಂಪತಿಗಳು ಸ್ವಾಮೀಜಿಯವರಿಗೆ ಫಲಪುಷ್ಪನೀಡಿದರು. ಒಡಿಯೂರು ಶ್ರೀ ಷಷ್ಠ್ಯಬ್ದ ಸಂಭ್ರಮ ಸಮಿತಿ ಪ್ರಧಾನ ಕಾರ್ಯದರ್ಶಿ ಹರಿಣಾಕ್ಷಿ ಜೆ. ಶೆಟ್ಟಿರವರು ಸಾಧ್ವಿ ಶ್ರೀ ಮಾತಾನಂದಮಯೀರವರಿಗೆ ಫಲಪುಷ್ಪ ನೀಡಿದರು. ದೇವಪ್ಪ ನೋಂಡ, ರಘುರಾಮ ಶೆಟ್ಟಿ ಕನ್ಯಾನ, ಲೋಕನಾಥ ಶೆಟ್ಟಿ, ದೇವಪ್ಪ ನಾಯ್ಕ, ಮೊದಲಾದವರು ಅತಿಥಿಗಳಿಗೆ ಪುಸ್ತಕಹಾರ ನೀಡಿ ನೀಡಿ ಸ್ವಾಗತಿಸಿದರು.

ಕೃತಿ ಶೆಟ್ಟಿ ಪ್ರಾರ್ಥಿಸಿ,  ರಥೋತ್ಸವ ಸ್ವಾಗತ‌ ಸಮಿತಿ ಸಂಚಾಲಕ   ಲಿಂಗಪ್ಪ ಗೌಡ ಪನೆಯಡ್ಕ ಸ್ವಾಗತಿಸಿದರು. ಸೇರಾಜೆ ಗಣಪತಿ ಭಟ್ ವಂದಿಸಿದರು.  ಯಶವಂತ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.

More from the blog

ಆಭರಣ ಪ್ರಿಯರಿಗೆ ಗುಡ್‌ನ್ಯೂಸ್‌ : ವಾರಾಂತ್ಯದಲ್ಲಿ ಚಿನ್ನದ ದರ ತುಸು ಇಳಿಕೆ…

ಬೆಂಗಳೂರು: ಚಿನ್ನದ ದರದಲ್ಲಿ ಮತ್ತೆ ಹಾವು ಏಣಿಯಾಟ ಶುರುವಾಗಿದೆ. ಕಳೆದೆರಡು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಬಂಗಾರದ ಬೆಲೆ ಇದೀಗ ಇಳಿಕೆಯಾಗಿದೆ. ನಿನ್ನೆಯ ದರಕ್ಕೆ ಹೋಲಿಸಿದರೆ 10ಗ್ರಾಂ ಚಿನ್ನದ ಮೇಲೆ 450 ರೂ...

ನೀತಿ ಸಂಹಿತೆ ಇರುವಾಗ ಆಶ್ಲೇಷ ಬಲಿ ಮಂಟಪ ಕಾಮಗಾರಿ ಆರಂಭ ಸಮರ್ಪಕವಲ್ಲ- ಹರೀಶ್ ಇಂಜಾಡಿ

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ಹಿಂದಿನ ಆಡಳಿತ ಮಂಡಳಿಯ ಕೊನೇ ದಿನಗಳಲ್ಲಿ ದಾನಿಗಳು ಕ್ಷೇತ್ರದಲ್ಲಿ ಆಶ್ಲೇಷ ಬಲಿ ಮಂಟಪ ನಿರ್ಮಿಸಲು ಮುಂದೆ ಬಂದರು. ಇದು ಸ್ವಾಗತಾರ್ಹ ಬೆಳವಣಿಗೆ. ಆದರೆ...

ಪ್ರಧಾನಿ ಮೋದಿ ಕರೆ : ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ  ಬಿಜೆಪಿ ಕಾರ್ಯಕರ್ತರಿಗೆ ಕರೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಪ್ರತಿಯೊಬ್ಬರ ಕೈ ಮೇಲೆ ಕಮಲದ ಹಚ್ಚೆ ಹಾಕಿ “ಮೆಹಂದಿ ಅಭಿಯಾನ" ನಡೆಸುವಂತೆ ಸೂಚನೆ ನೀಡಿದ್ದಾರೆ. ಜತೆಗೆ ಮೋದಿ...

ದಿನದಿಂದ ದಿನಕ್ಕೆ ಏರುತ್ತಿದೆ ತಾಪಮಾನ : ಕಡಬ, ಅಜೆಕಾರಿನಲ್ಲಿ ದಾಖಲೆಯ ಉಷ್ಣಾಂಶ

ಮಂಗಳೂರು: ಮುಂದಿನ ಎರಡು ದಿನಗಳ ಕಾಲ ಬಿಸಿಲಿನ ಶಾಕ ಮತ್ತಷ್ಟು ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ ಕರಾವಳಿ ಭಾಗದಲ್ಲಿ ತಾಪಮಾನ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದ್ದು, ಎ. 4ರಿಂದ 5ರ...